ನವದೆಹಲಿ: ಕೋವಿಡ್ನ ಗರಿಷ್ಠ ಪರಿಣಾಮವನ್ನು ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರು ಅನುಭವಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ತಾಯಿ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯದ ಕುರಿತ ಕಾರ್ಯಕ್ರಮವೊಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಸಚಿವ ಹರ್ಷವರ್ಧನ್, ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರು ಎಲ್ಲಾ ಆರೋಗ್ಯ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
-
#WatchNow !! Union Health Minsiter Dr Harsh Vardhan addressing @PMNCH event-'Brave Voices, Bold Actions: Delivering on What Women, Adolescents & Children Want during #Covid19 & Beyond' on the sidelines of #UNGA75, via VC @PMOIndia @UN https://t.co/JQucw6MHUj
— DrHarshVardhanOffice (@DrHVoffice) September 29, 2020 " class="align-text-top noRightClick twitterSection" data="
">#WatchNow !! Union Health Minsiter Dr Harsh Vardhan addressing @PMNCH event-'Brave Voices, Bold Actions: Delivering on What Women, Adolescents & Children Want during #Covid19 & Beyond' on the sidelines of #UNGA75, via VC @PMOIndia @UN https://t.co/JQucw6MHUj
— DrHarshVardhanOffice (@DrHVoffice) September 29, 2020#WatchNow !! Union Health Minsiter Dr Harsh Vardhan addressing @PMNCH event-'Brave Voices, Bold Actions: Delivering on What Women, Adolescents & Children Want during #Covid19 & Beyond' on the sidelines of #UNGA75, via VC @PMOIndia @UN https://t.co/JQucw6MHUj
— DrHarshVardhanOffice (@DrHVoffice) September 29, 2020
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡದಲ್ಲಿದ್ದರೂ ಆರೋಗ್ಯ ಸೇವೆಗಳನ್ನು ಮಹಿಳೆಯರು, ಮಕ್ಕಳು ಮತ್ತು ಹದಿಹರೆಯದವರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಈ ಬಗ್ಗೆ ಗಮನ ಹರಿಸಿದ್ದೇವೆ ಎಂದಿದ್ದಾರೆ.
ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದಂತೆ ಗುಣಮಟ್ಟದ ಆರೈಕೆಯನ್ನು ಒದಗಿಸುವಲ್ಲಿ ನಾವು ಈಗ ಬಹಳ ದೂರ ಸಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.