ETV Bharat / bharat

ರಾಜ್ಯದ 178 ತಾಲೂಕುಗಳಲ್ಲಿ 'ಮತ್ಸ್ಯವರ್ಧಿನಿ' ಹೋಟೆಲ್ ಆರಂಭ

ಕಡಲ ಮೀನುಗಳು ಸಿಗದಿರುವ ಕಲಬುರಗಿ, ರಾಯಚೂರು, ಮಂಡ್ಯದಂತಹ ಪ್ರದೇಶಗಳಲ್ಲಿನ ರಾಜ್ಯದ 178 ತಾಲೂಕುಗಳಲ್ಲಿ ಕಡಲ ಮೀನುಗಳ ಖಾದ್ಯ ದೊರೆಯುವ ಮತ್ಸ್ಯ ವರ್ಧಿನಿ ಹೋಟೆಲ್ ಆರಂಭ ಮಾಡಬೇಕೆಂದು ಆಯೋಜನೆ ಮಾಡುತ್ತಿದ್ದೇವೆ ಎಂದು ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಜ್ಯದ 178 ತಾಲೂಕುಗಳಲ್ಲಿ 'ಮತ್ಸ್ಯವರ್ಧಿನಿ' ಹೋಟೆಲ್ ಆರಂಭ : ಶ್ರೀನಿವಾಸ ಪೂಜಾರಿ
author img

By

Published : Sep 5, 2019, 10:12 PM IST

ಮಂಗಳೂರು: ಕಡಲ ಮೀನುಗಳು ಸಿಗದಿರುವ ಕಲಬುರಗಿ, ರಾಯಚೂರು, ಮಂಡ್ಯದಂತಹ ಪ್ರದೇಶಗಳಲ್ಲಿನ ರಾಜ್ಯದ 178 ತಾಲೂಕುಗಳಲ್ಲಿ ಕಡಲ ಮೀನುಗಳ ಖಾದ್ಯ ದೊರೆಯುವ ಮತ್ಸ್ಯ ವರ್ಧಿನಿ ಹೋಟೆಲ್ ಆರಂಭ ಮಾಡಬೇಕೆಂಬ ಚಿಂತನೆ ಇದೆ ಎಂದು ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯದ 178 ತಾಲೂಕುಗಳಲ್ಲಿ 'ಮತ್ಸ್ಯವರ್ಧಿನಿ' ಹೋಟೆಲ್ ಆರಂಭ : ಶ್ರೀನಿವಾಸ ಪೂಜಾರಿ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಷನ್ ವತಿಯಿಂದ ನಗರದ ಪಾಂಡೇಶ್ವರ ಎಮ್ಮೆ ಕೆರೆಯಲ್ಲಿರುವ ರಮಾ ಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇಡೀ ರಾಜ್ಯದಲ್ಲಿ ಸರ್ಕಾರವು ಸಮಗ್ರವಾದ ಅನುಮೋದನೆಯನ್ನು ಅರ್ಥಮಾಡಿಕೊಂಡು ಮೀನುಗಾರರ ಪರವಾಗಿ ಕೆಲಸ ಮಾಡುತ್ತಿದೆ. ಇಲ್ಲಿವರೆಗೆ ಮೀನುಗಾರಿಕಾ ವಲಯವನ್ನು ಮಂತ್ರಿಗಳು, ಅಧಿಕಾರಿಗಳು, ರಾಜಕಾರಣಿಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇನ್ನು ಮುಂದೆ ಮೀನುಗಾರರ ಭಾವನೆಗಳು, ಆಲೋಚನೆ ಗಳನ್ನು ಅರ್ಥಮಾಡಿಕೊಂಡು ಮೀನುಗಾರರ ಮೂಲಕವೇ ನಮ್ಮ ಇಲಾಖೆಯನ್ನು ಮುನ್ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಮೀನುಗಾರರ ಸಮಸ್ಯೆಗಳನ್ನು ಸರ್ಕಾರದ ಸಮಸ್ಯೆಗಳೆಂದು ತಿಳಿದು, ಕೇಂದ್ರದಿಂದ, ರಾಜ್ಯದಿಂದ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನವನ್ನು ಮಾಡುತ್ತೇವೆ. ಪ್ರಥಮ ಬಾರಿಗೆ ಕೇಂದ್ರದಲ್ಲಿ ಮೀನುಗಾರಿಕಾ ಇಲಾಖೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿನ ಮೀನುಗಾರಿಕಾ ಇಲಾಖೆಯ ಮಂತ್ರಿಗಳು ಹಾಗೂ ರಾಜ್ಯದ ಮೀನುಗಾರಿಕಾ ಇಲಾಖಾ ಮಂತ್ರಿಗಳು ಒಟ್ಟಾಗಿ ಸಮಸ್ಯೆ ಬಗೆಹರಿಸುತ್ತೇವೆ. ಸಮಸ್ಯೆಗಳನ್ನು ಮಂತ್ರಿಯಾಗಿರುವ ನನಗೆ ಮತ್ತು ಅಧಿಕಾರಿಗಳಿಗೆ ತಿಳಿಸಿ, ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್, ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ನಿರ್ದೇಶಕಿ ಉಷಾರಾಣಿ ಮತ್ತಿತರರು ಉಪಸ್ಥಿತರಿದ್ದರು.

Intro:ಮಂಗಳೂರು: ಮೀನುಗಾರಿಕಾ ಇಲಾಖೆಯ ಮೂಲಕ ಮತ್ಸ್ಯ ವರ್ಧಿನಿ ಎಂಬ ಹೋಟೆಲ್ ಪ್ರಾರಂಭ ಮಾಡಲಾಗುತ್ತದೆ. ಕಡಲ ಮೀನುಗಳು ಸಿಗದಿರುವ ಕಲಬುರಗಿ, ರಾಯಚೂರು, ಮಂಡ್ಯದಂತಹ ಪ್ರದೇಶಗಳಲ್ಲಿನ ರಾಜ್ಯದ 178 ತಾಲೂಕುಗಳಲ್ಲಿ ಕಡಲ ಮೀನುಗಳ ಖಾದ್ಯ ದೊರೆಯುವ ಮತ್ಸ್ಯ ವರ್ಧಿನಿ ಹೋಟೆಲ್ ಆರಂಭ ಮಾಡಬೇಕೆಂದು ಆಯೋಜನೆ ಮಾಡುತ್ತಿದ್ದೇವೆ ಎಂದು ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಷನ್ ವತಿಯಿಂದ ನಗರದ ಪಾಂಡೇಶ್ವರ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇಡೀ ರಾಜ್ಯದಲ್ಲಿ ಸರಕಾರವು ಸಮಗ್ರವಾದ ಅನುಮೋದನೆಯನ್ನು ಅರ್ಥಮಾಡಿಕೊಂಡು ಮೀನುಗಾರರ ಪರವಾಗಿ ಕೆಲಸ ಮಾಡುತ್ತಿದೆ. ಇಲ್ಲಿವರೆಗೆ ಮೀನುಗಾರಿಕಾ ವಲಯವನ್ನು ಮಂತ್ರಿಗಳು, ಅಧಿಕಾರಿಗಳು, ರಾಜಕಾರಣಿಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇನ್ನು ಮುಂದೆ ಮೀನುಗಾರರ ಭಾವನೆಗಳು, ಆಲೋಚನೆ ಗಳನ್ನು ಅರ್ಥಮಾಡಿಕೊಂಡು ಮೀನುಗಾರರ ಮೂಲಕವೇ ನಮ್ಮ ಇಲಾಖೆಯನ್ನು ಮುನ್ನಡೆಸಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Body:ಮೀನುಗಾರರ ಸಮಸ್ಯೆಗಳನ್ನು ಸರಕಾರದ ಸಮಸ್ಯೆಗಳೆಂದು ತಿಳಿದು, ಕೇಂದ್ರದಿಂದ ರಾಜ್ಯದಿಂದ ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನವನ್ನು ಮಾಡುತ್ತೇವೆ. ಪ್ರಥಮ ಬಾರಿಗೆ ಕೇಂದ್ರದಲ್ಲಿ ಮೀನುಗಾರಿಕಾ ಇಲಾಖೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿನ ಮೀನುಗಾರಿಕಾ ಇಲಾಖೆಯ ಮಂತ್ರಿಗಳು ಹಾಗೂ ರಾಜ್ಯದ ಮೀನುಗಾರಿಕಾ ಇಲಾಖಾ ಮಂತ್ರಿಗಳು ಒಟ್ಟಾಗಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಮೀನುಗಾರರ ಸಮಸ್ಯೆಗಳನ್ನು ಮಂತ್ರಿಯಾಗಿರುವ ನನಗೆ ಮತ್ತು ಅಧಿಕಾರಿಗಳಿಗೆ ತಿಳಿಸಿ, ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಈ ಸಂದರ್ಭ ಮೀನುಗಾರರು ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಸಚಿವರು ಸಲ್ಲಿಸಿದರು.

ಈ ಸಂದರ್ಭ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕ ಹರೀಶ್ ಕುಮಾರ್, ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ನಿರ್ದೇಶಕಿ ಉಷಾರಾಣಿ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.