ETV Bharat / bharat

ಕೇರಳದ ಪತ್ರಕರ್ತ ಸೇರಿ ನಾಲ್ವರ ನ್ಯಾಯಾಂಗ ಬಂಧನ ವಿಸ್ತರಿಸಿದ ಮಥುರಾ ಕೋರ್ಟ್​ - ಮಥುರಾದಲ್ಲಿ ಕೇರಳದ ಪತ್ರಕರ್ತ ಬಂಧನ

ಹಥ್ರಾಸ್​ಗೆ ತೆರಳುವ ದಾರಿ ಮಧ್ಯೆ ಬಂಧಿತರಾದ ಕೇರಳದ ಪತ್ರಕರ್ತ ಮತ್ತು ಇತರ ಮೂವರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

Mathura court extends judicial custody of Kerala journalist
ಕೇರಳದ ಪತ್ರಕರ್ತನ ನ್ಯಾಯಾಂಗ ಬಂಧನ ವಿಸ್ತರಣೆ
author img

By

Published : Oct 20, 2020, 10:01 PM IST

ಮಥುರಾ : ಹಥ್ರಾಸ್​ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳುವಾಗ ಬಂಧಿತರಾದ ಕೇರಳದ ಪತ್ರಕರ್ತ ಮತ್ತು ಇತರ ಮೂವರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ದುಷ್ಕೃತ್ಯ ನಡೆಸುವ ಉದ್ದೇಶ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ, ಈ ತಿಂಗಳ ಆರಂಭದಲ್ಲಿ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್, ಸ್ನೇಹಿತರಾದ ಆತೀಕುರಹ್ಮಾನ್, ಆಲಂ ಮತ್ತು ಮಸೂದ್​ನ್ನು ಹಥ್ರಾಸ್​ಗೆ ತೆರಳುವ ದಾರಿ ಮಧ್ಯೆ, ಸಿಆರ್‌ಪಿಸಿಯ ಸೆಕ್ಷನ್ 151 ರ ಅಡಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರ ಮೇಲೆ ದೇಶದ್ರೋಹ ಮತ್ತು ವಿವಿಧ ಭಯೋತ್ಪಾದಕ ಕೃತ್ಯಗಳ ಆರೋಪ ಹೊರಿಸಲಾಗಿತ್ತು. ಅಕ್ಟೋಬರ್ 7 ರಂದು ನಾಲ್ವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಮಥುರಾ ಮುಖ್ಯ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅಂಜು ರಜಪೂತ್, ನಾಲ್ವರ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್​ 2 ರವರೆಗೆ ವಿಸ್ತರಿಸಿದ್ದಾರೆ. ಹಿಂದಿನ ನ್ಯಾಯಾಂಗ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆ, ನಾಲ್ವರನ್ನೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.