ETV Bharat / bharat

ಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವಿಗೆ ಅರ್ಜಿ: ವಿಚಾರಣೆಗೆ ಕೋರ್ಟ್​ ಒಪ್ಪಿಗೆ!

author img

By

Published : Oct 16, 2020, 8:57 PM IST

ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವು ವಿವಾದ ಪ್ರಕರಣದ ವಿಚಾರಣೆಯನ್ನು ಮಥುರಾದಲ್ಲಿ ಸಿವಿಲ್‌ ಕೋರ್ಟ್‌ ಕೈಗೆತ್ತಿಕೊಳ್ಳಲಿದ್ದು, ಅದಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ.

Mathura court admits plea
Mathura court admits plea

ಲಖನೌ( ಉತ್ತರ ಪ್ರದೇಶ): ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿ ತೆರವುಗೊಳಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಲು ಕೋರ್ಟ್​ ಒಪ್ಪಿಗೆ ಸೂಚಿಸಿದೆ.

ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ದೇಗುಲಕ್ಕೆ ಹೊಂದಿಕೊಂಡು ಮಸೀದಿ ಇದೆ. ಇದನ್ನ ತೆರವುಗೊಳಿಸಬೇಕು ಎಂದು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಇದೀಗ ಮಥುರಾ ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ.

ನವೆಂಬರ್​​ 18ಕ್ಕೆ ಇದರ ವಿಚಾರಣೆ ನಡೆಯಲಿರುವ ಕಾರಣ ತೀವ್ರ ಕುತೂಹಲ ಉಂಟಾಗಿದೆ. 1669-70ರ ಮೊಗಲ್‌ ಸಾಮ್ರಾಜ್ಯದ ಔರಂಗಜೇಬ್‌ನ ಆದೇಶದಂತೆ 13.37 ಎಕರೆ ಪ್ರದೇಶದ ಕಟ್ರಾ ಕೇಶವ್‌ ದೇವ್‌ ದೇವಸ್ಥಾನದ ಆವರಣದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಈ ಮಸೀದಿಯನ್ನು ತೆರವು ಮಾಡುವಂತೆ ಕೋರಿ ಮಥುರಾದ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

mosque
ಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವಿಗೆ ಅರ್ಜಿ ಸಲ್ಲಿಕೆ

ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ನಡುವೆ ಕೃಷ್ಣ ಜಮ್ಮ ಭೂಮಿ ವಿವಾದ ಏರ್ಪಟ್ಟಿದ್ದು, ದೇವಸ್ಥಾನ ವ್ಯಾಪ್ತಿಯಿಂದ ಮಸೀದಿಯನ್ನು ತೆರವು ಮಾಡಬೇಕು ಎಂದು ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನದ ಒತ್ತಾಯವಾಗಿದೆ. ಲಖನೌದ ನಿವಾಸಿ ರಂಜನ ಅಗ್ನಿಹೋತ್ರಿ ಹಾಗೂ ಐವರು ಈ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದೆಹಲಿ ನಿವಾಸಿ ಪರ್ವೇಶ್‌ ಕುಮಾರ್‌, ಉತ್ತರ ಪ್ರದೇಶದ ಸಿದಾರ್ಥ ನಗರ ನಿವಾಸಿ ರಾಜೇಶ್‌ ಮಣಿ ತ್ರಿಪಾಟಿ, ಬಸ್ತಿಯ ಕರುಣೇಶ್‌ ಕುಮಾರ್‌ ಶುಕ್ಲಾ ಮತ್ತು ಲಖನೌನ ಶಿವಾಜಿ ಸಿಂಗ್‌, ತ್ರಿಪುರಾದ ತಿವಾರಿ ಇದರಲ್ಲಿ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.