ಸಾಹೀಬ್ಗಂಜ್(ಜಾರ್ಖಂಡ್): ಹುತಾತ್ಮ ಯೋಧ ಶಾಹೀದ್ ಕುಂದನ್ ಓಜಾ ಅವರ ಮೃತದೇಹ ಅವರ ಸ್ವಗ್ರಾಮವನ್ನು ತಲುಪಿತು. ಈ ಸಂದರ್ಭದಲ್ಲಿ ಇಡೀ ಗ್ರಾಮದಲ್ಲಿ ಶೋಕದ ವಾತಾವರಣವಿತ್ತು.
ಹುತಾತ್ಮ ಯೋಧನಿಗೆ ಗಾರ್ಡ್ ಆಫ್ ಆನರ್ನಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಹುತಾತ್ಮರ ಪಾರ್ಥಿವ ಶರೀರವನ್ನು ಮುನಿಲಾಲ್ ಶವಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಹುತಾತ್ಮರ ಮೃತದೇಹದ ಜೊತೆ ಸ್ಥಳೀಯರು ಚಿತಾಗಾರದವರೆಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಹುತಾತ್ಮರ ಗೌರವಾರ್ಥವಾಗಿ ಸ್ಥಳೀಯರು ಓಜಾ ಅಮರ್ ರಹೇ ಎಂದು ಘೋಷಣೆ ಕೂಗಿದರು.
ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ಕಾಳಗದಲ್ಲಿ, ಭಾರತದ 20 ಸೈನಿಕರು ಹುತಾತ್ಮರಾಗಿದ್ದು, ಇದರಲ್ಲಿ ಜಾರ್ಖಂಡ್‌ನ ಇಬ್ಬರು ಸೈನಿಕರು ಸಹ ಹುತಾತ್ಮರಾಗಿದ್ದರು. ಸೆರೈಕೆಲಾದ ಗಣೇಶ್ ಹನ್ಸಾದ್ ಮತ್ತು ಸಾಹಿಬ್‌ಗಂಜ್‌ನ ಕುಂದನ್ ಓಜಾ.