ETV Bharat / bharat

ಲಾಕ್‌ಡೌನ್, ಅಕಾಲಿಕ ಮಳೆಯಿಂದ ಘಮ ಕಳ್ಕೊಂಡ ಮಾವು; ಹಣ್ಣುಗಳ ರಾಜನಿಗೆ ಕಿಮ್ಮತ್ತಿಲ್ಲ - ಮಾವು ನಷ್ಟ

ಪ್ರತಿ ವರ್ಷ ಮಾವು ಬೆಳೆಗಾರರಿಗೆ ಒಂದಲ್ಲೊಂದು ರೀತಿಯ ಕಂಟಕ ಇದ್ದೇ ಇರುತ್ತದೆ. ಈ ಬಾರಿಯೂ ಕೂಡಾ ಕೊರೊನಾ ಹಾಗೂ ಲಾಕ್​ಡೌನ್​ ಪರಿಣಾಮದಿಂದಾಗಿ ಮಾವಿನ ಹಣ್ಣುಗಳಿಗೆ ಬೇಡಿಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

Mango growers
ಮಾವು ಬೆಳೆ
author img

By

Published : May 2, 2020, 12:00 PM IST

ಲಖ್ನೋ (ಉತ್ತರ ಪ್ರದೇಶ): ಕೋವಿಡ್ -19 ಸೋಂಕಿನಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾದ ಕಾರಣದಿಂದ ಮಾವು ಬೆಳೆಗಾರರು ಈ ಋತುವಿನಲ್ಲಿ ಭಾರಿ ನಷ್ಟವನ್ನು ಅನುಭವಿಸಲಿದ್ದಾರೆ. ಈ ಬಾರಿ ಶೇ 100ರಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

''ಲಾಕ್​ಡೌನ್​ನಿಂದಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಪ್ರಮುಖ ಮಾವು ಉತ್ಪಾದಿಸುವ ರಾಜ್ಯಗಳಲ್ಲಿ ಮಾವು ಬೆಳೆಗಾರರ ಸ್ಥಿತಿ ಕಠೋರವಾಗಿರಲಿದೆ'' ಎಂದು ಮಾವಿನ ಬೆಳೆಗಾರರ ​​ಸಂಘದ ಅಧ್ಯಕ್ಷ ರಾಷ್ಟ್ರೀಯ ಅಧ್ಯಕ್ಷ ಇನ್ಸ್ರಾಮ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಋತುವಿನಲ್ಲಿ ಮಾರುಕಟ್ಟೆ ಕಡಿಮೆಯಾಗೋದು ಮಾತ್ರವಲ್ಲದೇ, ಉತ್ತರ ಭಾರತದಲ್ಲಿ ಅಕಾಲಿಕ ಮಳೆಯ ಕಾರಣಕ್ಕೆ ಉತ್ಪಾದನೆಯೂ ಕೂಡಾ ಕಳೆದ ವರ್ಷಕ್ಕಿಂತ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

''ಮಹಾರಾಷ್ಟ್ರದಲ್ಲಿ ಅಲ್ಫೋನ್ಸೊ ಮಾವಿನ ಹಣ್ಣಿನ ಬೆಲೆ ಈ ವರ್ಷ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಕಳೆದ ವರ್ಷ ಪ್ರತಿ ಡಜನ್‌ಗೆ 1,500 ರೂ.ಗಳಷ್ಟಿತ್ತು, ಆದರೆ ಈ ವರ್ಷ ಪ್ರತಿ ಡಜನ್‌ಗೆ 400-500ರೂ.ಗಳಷ್ಟಿದೆ. ಮಧ್ಯಪ್ರಾಚ್ಯ ದೇಶಗಳು ಮತ್ತು ಯುರೋಪಿಗೆ ಮಾವಿನ ರಫ್ತು ಸ್ಥಗಿತಗೊಂಡಿದ್ದು, ಮಾವಿನ ಬೆಲೆ ಏರಿಕೆಯಾಗುವ ಯಾವುದೇ ಸೂಚನೆ ಇಲ್ಲ'' ಎಂದು ಮಾವು ಮಾರುಕಟ್ಟೆಯ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.

ದೇಶವು ಕಳೆದ ವರ್ಷ ಸುಮಾರು 1 ಕೋಟಿ 75 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದಿಸಿತ್ತು. ಈ ವರ್ಷ 1 ಕೋಟಿ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುವ ಸಾಧ್ಯತೆಯಿದೆ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಇಳುವರಿ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಇದರಿಂದಾಗಿ ಸುಮಾರು 6 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.