ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಕಳ್ಳನೋರ್ವ ಎಟಿಎಂ ಕಾರ್ಡ್‌ಗಳನ್ನು ಕದ್ದು,10 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದ್ದಾನೆ. ಈ ಹಿನ್ನೆಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರೋಹಿತ್ ಪಾಂಡೆ (28) ಜೂನ್ 14 ರಂದು ಎಟಿಎಂ ನಿರ್ವಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಿದ್ದಾನೆ. ಈ ಸಂದರ್ಭವನ್ನೇ ಬಳಸಿಕೊಂಡ ಆತ ಬೇರೆ ಒಂದು ಎಟಿಎಂ ಕಾರ್ಡ್ನ್ನು ವ್ಯಕ್ತಿಗೆ ನೀಡಿ ನಿಜವಾದ ಕಾರ್ಡ್ನ್ನು ತನ್ನಲ್ಲೇ ಇರಿಸಿಕೊಂಡು ಹಲವಾರು ಬಾರಿ ಹಣ ದೋಚಿದ್ದಾನೆ. ಈ ಬಗ್ಗೆ ವಾಲಿವ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯ್ ಚವ್ಹಾಣ್ ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ 47 ಕದ್ದ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದ ಚವ್ಹಾಣ್ , ಕಳ್ಳ ಸುಮಾರು 10.73 ಲಕ್ಷ ರೂ.ಗಳ ವಹಿವಾಟು ನಡೆಸಿದ್ದಾನೆ ಎಂದು ಹೇಳಿದ್ದಾರೆ.