ETV Bharat / bharat

ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ಹಸು ಮಾರಾಟ ಮಾಡಿ ಮೊಬೈಲ್​ ಖರೀದಿಸಿದ ಬಡ ಕುಟುಂಬ - ಮೊಬೈಲ್​ ಖರೀದಿಸಲು ಹಸು ಮಾರಾಟ

ಕೊರೊನಾ ಅಬ್ಬರ ಜೋರಾಗಿರುವ ಕಾರಣ ಆನ್​ಲೈನ್​ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತಮ್ಮ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ಫೋನ್‌ ಖರೀದಿಸಲು ಇಲ್ಲಿನ ಬಡ ಕುಟುಂಬವೊಂದು ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹಸುವನ್ನೇ ಮಾರಾಟ ಮಾಡಿದೆ.

smartphone for children
smartphone for children
author img

By

Published : Jul 23, 2020, 6:04 PM IST

Updated : Jul 23, 2020, 6:10 PM IST

ಕಾಂಗ್ರಾ(ಹಿಮಾಚಲ ಪ್ರದೇಶ): ಕೊರೊನಾ ಸೋಂಕು ಹರಡುವಿಕೆ ಜೋರಾಗಿರುವ ಕಾರಣ ಮಕ್ಕಳು ಶಾಲೆಗೆ ಹೋಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಕೆಲ ರಾಜ್ಯಗಳ ಸರ್ಕಾರಗಳು ಆನ್​ಲೈನ್​ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಗುಮ್ಮಾರ್​ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿನ ಕುಟುಂಬವೊಂದು ತಮ್ಮ ಮಕ್ಕಳಿಗೆ ಸ್ಮಾರ್ಟ್​ಫೋನ್​ ಕೊಡಿಸುವ ಉದ್ದೇಶದಿಂದ ಮನೆಗೆ ಆಧಾರವಾಗಿದ್ದ ಹಸು ಮಾರಾಟ ಮಾಡಿದೆ.

ಮನೆಗೆ ಆಧಾರಸ್ತಂಭವಾಗಿದ್ದ ಹಸು ಮಾರಾಟ

ಮಕ್ಕಳು ಆನ್‌ಲೈನ್‌ ಮೂಲಕ ಶಿಕ್ಷಣ ಪಡೆಯಲು ಸ್ಮಾರ್ಟ್​​ಫೋನ್ ಇರಲಿಲ್ಲ. ಹೀಗಾಗಿ, ಕೇವಲ 6 ಸಾವಿರ ರೂಪಾಯಿಗೆ ಹಸು ಮಾರಾಟ ಮಾಡಿ ಮೊಬೈಲ್ ಖರೀದಿಸಿದ್ದೇವೆ ಎಂದು ಮಕ್ಕಳ ತಂದೆ ಕುಲ್ದೀಪ್​ ಹೇಳಿದ್ದಾರೆ.

ತೀರ ಬಡತನದಲ್ಲಿರುವ ಈ ಕುಟುಂಬ, ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದೆ. ಹಸುವಿನ ಹಾಲು ಮಾರಾಟದಿಂದ ಬಂದ ಹಣದಿಂದ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸುವುದಾಗಿ ಕುಟುಂಬ ಹೇಳುತ್ತಿದೆ.

ಕುಲ್ದೀಪ್​​ ಅವರಿಗೆ ಎರಡು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಈ ಮಕ್ಕಳು 4 ಹಾಗೂ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ದಿನ ಪಕ್ಕದ ಮನೆಗೆ ಹೋಗಿ ಅವರು ವಿದ್ಯಾರ್ಜನೆ ಮಾಡುತ್ತಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಹಸು ಮಾರಾಟ ಮಾಡಿ ಸ್ಮಾರ್ಟ್‌ಫೋನ್​ ತೆಗೆದುಕೊಂಡು ಬಂದಿದ್ದಾರೆ.

ಇದೇ ವೇಳೆ ಗ್ರಾಮ ಪಂಚಾಯತಿ ವಿರುದ್ಧ ಹರಿಹಾಯ್ದಿರುವ ಕುಲ್ದೀಪ್​, ಬಿಪಿಎಲ್​ ಕಾರ್ಡ್​​ನಿಂದಲೂ ತಮ್ಮ ಹೆಸರು ತೆಗೆದಿದ್ದು, ನರೇಗಾ ಯೋಜನೆಯಿಂದಲೂ ಸರಿಯಾದ ಕೆಲಸ ಸಹ ಸಿಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

Last Updated : Jul 23, 2020, 6:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.