ETV Bharat / bharat

ನನ್ನ ಮನೆ ತೊರೆದು ಸೈನಿಕರಿಗೆ ಶರಣಾಗಿ.. ಉಗ್ರರಿಗೆ ಮನೆ ಮಾಲೀಕ ಮನವಿ! ವಿಡಿಯೋ - ಉಗ್ರರಿಗೆ ಶರಣಾಗುವಂತೆ ಮನೆ ಮಾಲೀಕ ಮನವಿ

ಉಗ್ರರು ಅಡಗಿದ್ದ ಮನೆಯ ಮಾಲೀಕ, ದಯವಿಟ್ಟು ನನ್ನ ಮನೆಯನ್ನು ತೊರೆದು ಶರಣಾಗಿ ಎಂದು ಭಯೋತ್ಪಾದಕರಿಗೆ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

man requests to militants surrender
ಉಗ್ರರಿಗೆ ಮನೆ ಮಾಲೀಕ ಮನವಿ
author img

By

Published : Jun 21, 2020, 5:58 PM IST

ಶ್ರೀನಗರ: ಭಯೋತ್ಪಾದಕರು ಅಡಗಿದ್ದ ಮನೆ ತೊರೆದು ಸೈನಿಕರಿಗೆ ಶರಣಾಗುವಂತೆ ವ್ಯಕ್ತಿಯೋರ್ವ ಉಗ್ರರನ್ನು ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

1 ನಿಮಿಷ 47 ಸೆಕೆಂಡ್ ಇರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ದಯವಿಟ್ಟು ನನ್ನ ಮನೆ ಬಿಟ್ಟು ಹೋಗಿ ಸೈನಿಕರಿಗೆ ಶರಣಾಗಿ ಎಂದು ವಿನಂತಿಸುತ್ತಿರುವುದನ್ನು ಕೇಳಬಹುದಾಗಿದೆ.

ಉಗ್ರರಿಗೆ ಮನೆ ಮಾಲೀಕ ಮನವಿ

ವಿಡಿಯೋ ತುಣುಕಿನಲ್ಲಿ ಮನವಿ ಮಾಡಿರುವ ವ್ಯಕ್ತಿ ಶ್ರೀನಗರದ ಜೋನಿಮಾರ್ ಪ್ರದೇಶದಲ್ಲಿ ಉಗ್ರರು ಅಡಗಿದ್ದ ಮನೆಯ ಮಾಲೀಕ ಎಂದು ಹೇಳಲಾಗಿದೆ. 'ದಯವಿಟ್ಟು ಶರಣಾಗಿ, ನನ್ನ ಮಗಳ ಮದುವೆ ಇದೆ. ನೀವು ಶರಣಾಗದಿದ್ದರೆ ನನ್ನ ಮನೆಯನ್ನು ಸುಟ್ಟುಬಿಡುತ್ತಾರೆ' ಎಂದು ಮನವಿ ಮಾಡುವುದನ್ನು ಕೇಳಬಹುದಾಗಿದೆ.

ಶ್ರೀನಗರದ ಝೋನಿಮಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈವರೆಗೆ ಮೂವರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.