ಜೈಪುರ : ಮದ್ಯ ಸೇವಿಸಿ ಮನೆಗೆ ಬರುವ ಪತಿ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದುದನ್ನು ತಾಳಲಾರದೆ ಪತ್ನಿ ತವರು ಮನೆ ಹೋಗಿದ್ದಳು. ಅಲ್ಲಿಗೂ ತೆರಳಿದ ಕಾಮುಕ ತಂದೆ ತನ್ನ 7 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.
ಈ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. ಈಗಾಗಲೇ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಟೆಂಪೋ ಚಾಲಕನಾಗಿದ್ದ ಗಂಡ ಪ್ರತಿದಿನ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಜತೆ ಜಗಳವಾಡುತ್ತಿದ್ದ. ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಆಕೆ ಮಗಳೊಂದಿಗೆ ತವರು ಮನೆಗೆ ಹೋಗಿದ್ದಾಳೆ. ರಾತ್ರಿ ಅಲ್ಲಿಗೆ ತೆರಳಿರುವ ಕಾಮುಕ ಮಗಳನ್ನು ಕರೆದುಕೊಂಡು ಸೋದರನ ಮನೆಯಲ್ಲಿ ಬಿಟ್ಟಿದ್ದಾನೆ. ಅದಾದ ಬಳಿಕ ಆಕೆಯನ್ನು ಕರೆದುಕೊಂಡು ಹೋಗಿ ಟೆಂಪೋದಲ್ಲಿ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತೆಯ ಸಂಬಂಧಿಕರು ಹಾಗೂ ತಾಯಿ ದೂರು ನೀಡಿದ್ದು, POCSO ಕಾಯ್ದೆಯಡಿ ಆರೋಪಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.