ETV Bharat / bharat

ಶೌಚಾಲಯದಲ್ಲಿ ಮೊಬೈಲ್​ ಇಟ್ಟು ಮಹಿಳೆ ವಿಡಿಯೋ ಚಿತ್ರೀಕರಣ: ವ್ಯಕ್ತಿ ಬಂಧನ! - ಮಹಿಳೆ ವಿಡಿಯೋ ಚಿತ್ರೀಕರಣ

ಮಹಿಳಾ ಶೌಚಾಲಯದಲ್ಲಿ ಮೊಬೈಲ್​ ಇಟ್ಟು ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ ವ್ಯಕ್ತಿಯೋರ್ವನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Man held for filming woman
Man held for filming woman
author img

By

Published : Jun 5, 2020, 3:51 AM IST

ಮುಂಬೈ: ಮಹಿಳಾ ಶೌಚಾಲಯದಲ್ಲಿ ಮೊಬೈಲ್​ ಇಟ್ಟು ಮಹಿಳೆಯೋರ್ವಳ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ ವ್ಯಕ್ತಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

39 ವ ರ್ಷದ ವ್ಯಕ್ತಿ ತನ್ನ ಮೊಬೈಲ್​ ಫೋನ್​​ ಅಗ್ರಿಪಾಡಾ ಪ್ರದೇಶದ ಸಾರ್ವಜನಿಕ ಮಹಿಳಾ ಶೌಚಾಲಯದಲ್ಲಿಟ್ಟು ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ ವೇಳೆ ಸಿಕ್ಕಿಹಾಕಿಕೊಂಡಿದ್ದಾನೆ. ಆರೋಪಿಯನ್ನ 39 ವರ್ಷದ ಪ್ರಶಾಂತ್​ ಸಿಂಗ್​ ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಶೌಚಾಲಯದ ಕಿಟಕಿ ಬಳಿ ಮೊಬೈಲ್​ ಇರಿಸಿ ವಿಡಿಯೋ ಸೆರೆ ಹಿಡಿಯಲು ಮುಂದಾಗಿದ್ದಾನೆ. ಶೌಚಾಲಯದೊಳಗೆ ಹೋದ ಮಹಿಳೆ ಮೊಬೈಲ್​ ನೋಡಿ, ಅದನ್ನ ತೆಗೆದುಕೊಂಡು ಹೋಗಿದ್ದಾಳೆ. ತಕ್ಷಣವೇ ಪಕ್ಕದ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಪ್ರಶಾಂತ್​ ಹೊರಬಂದಿದ್ದು, ಮೊಬೈಲ್​ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾನೆ. ಮಹಿಳೆ ಘಟನೆ ಬಗ್ಗೆ ತನ್ನ ಸಹೋದರ ಮತ್ತು ಪ್ರದೇಶದ ಇತರ ನಿವಾಸಿಗಳಿಗೆ ತಿಳಿಸಿದ್ದಾಳೆ. ಈ ವೇಳೆ ಫೋನ್​ನಲ್ಲಿ ಮಹಿಳೆ ವಿಡಿಯೋ ಕೂಡ ಸಿಕ್ಕಿದೆ. ತಕ್ಷಣವೇ ಮೊಬೈಲ್​ ಪೊಲೀಸರಿಗೆ ಒಪ್ಪಿಸಲಾಗಿದ್ದು,ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.