ಆಂಧ್ರಪ್ರದೇಶ: ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಡೋಲ್ ಬಳಿ ರಾಜ್ಯ ಸಚಿವ ತಾನೇತಿ ವನಿತಾ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು 74 ವರ್ಷದ ವೃದ್ಧ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ. ವೆಂಕಟ್ರಮಣಯ್ಯ ಮೃತ ವೃದ್ಧ. ವಿಜಯವಾಡ ರಾಜ್ಯ ಹೆದ್ದಾರಿಯಲ್ಲಿ ಸಚಿವರ ಕಾರು ತೆರಳುತ್ತಿದ್ದ ವೇಳೆಯಲ್ಲಿ ವೆಂಕಟ್ರಮಣಯ್ಯನವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ರಸ್ತೆ ದಾಟುವ ಸಮಯದಲ್ಲಿ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧ ರಸ್ತೆಗೆ ಬಿದ್ದಿದ್ದಾರೆ.
ಇದನ್ನು ಕಂಡ ಸಚಿವರ ಕಾರಿನ ಚಾಲಕ ವೃದ್ಧನ ಮೇಲೆ ಕಾರು ಹತ್ತಿಸುವುದನ್ನು ತಪ್ಪಿಸಲು ಹೋಗಿ ರಸ್ತೆ ವಿಭಾಜಕಕ್ಕೆ ಕಾರನ್ನು ಗುದ್ದಿದ್ದಾನೆ. ದುರಾದುಷ್ಟವಶಾತ್ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಭೀಮಡೋಲ್ ಸಬ್ಇನ್ಸ್ಪೆಕ್ಟರ್ ತಿಳಿಸಿದರು.
ಈ ಅಪಘಾತದಲ್ಲಿ ಕಾರಿನಲ್ಲಿದ್ದ ಸಚಿವರಿಗಾಗಲಿ, ಚಾಲಕನಿಗಾಗಲಿ ಯಾವುದೇ ಗಾಯಗಳಾಗಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.