ಕೋಲ್ಕತ್ತಾ: ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲು, ಚುನಾವಣೆ ನಂತರ ಮೋದಿ ವಿರುದ್ಧ ಸಾದಾ ಗುಡುಗುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಳೆ ಪ್ರಧಾನಿ ಮೋದಿಯನ್ನ ಭೇಟಿ ಮಾಡಲಿದ್ದಾರೆ.
ಮೂಲಗಳ ಪ್ರಕಾರ ನಾಳೆ ನವದೆಹಲಿಗೆ ತೆರಳಿರುವ ದೀದಿ ಸಂಜೆ 4:30ಕ್ಕೆ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಲಿದ್ದಾರೆ. ಕೇಂದ್ರದಿಂದ ಪಶ್ಚಿಮಬಂಗಾಳಕ್ಕೆ ಬರಬೇಕಿರುವ ಅನುದಾನ ಮತ್ತು ಕೆಲ ಆಡಳಿತಾತ್ಮಕ ವಿಚಾರಗಳನ್ನ ಚರ್ಚೆ ನಡೆಸಲಿದ್ದಾರೆ.
ಅಲ್ಲದೆ ಬೆಂಗಾಲಿ ಸಿಹಿ ತಿನಿಸು ಮತ್ತು ಉಡುಗೊರೆಯನ್ನ ಮೋದಿಗೆ ನೀಡುವ ಮೂಲಕ ನವರಾತ್ರಿ ಉತ್ಸವದ ಅಂಗವಾಗಿ ನಡೆಯುವ ದುರ್ಗಾ ಪೂಜೆಗೆ ಮೋದಿ ಅವರನ್ನ ಆಹ್ವಾನಿಸಲಿದ್ದಾರೆ.
ಕಳೆದ 2018ರ ಮೇ 16ರಂದು ನಡೆದ ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದ ವಾರ್ಷಿಕ ಸಮಾವೇಶ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು.