ಕೋಲ್ಕತಾ (ಪಶ್ಚಿಮ ಬಂಗಾಳ): ಜುಲೈ 31ರವರೆಗೆ ವಿಸ್ತರಿಸಿರುವ ಕೊರೊನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ, ರಾತ್ರಿ 9ರಿಂದ ಬೆಳಗ್ಗೆ 5ರ ಬದಲು ರಾತ್ರಿ 10ರಿಂದ ಬೆಳಗ್ಗೆ 5 ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ.
ಜುಲೈ 1ರಿಂದ ಮೆಟ್ರೋ ಸೇವೆಗಳು ಪುನಾರಂಭಗೊಳ್ಳಬೇಕು ಎಂದು ನಾನು ಬಯಸುತ್ತೇನೆ. ಆದರೆ ಪ್ರಯಾಣಿಕರು ಕೇವಲ ಆಸನದಲ್ಲಿ ಕುಳಿತಿರಬೇಕು. ನಿಂತುಕೊಂಡು ಪ್ರಯಾಣಿಸುವುದಕ್ಕೆ ಅವಕಾಶ ಇಲ್ಲ. ಎಲ್ಲ ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯ ನಿಯಮಗಳನ್ನು ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.
ಕೋಲ್ಕತಾ ಮೆಟ್ರೋ ರೈಲ್ವೆ ಯಾವುದೇ ಬೋಗಿಯಲ್ಲಿ ಪ್ರಯಾಣಿಕರು ನಿಲ್ಲದಂತೆ ಅಥವಾ ರೈಲುಗಳು ತುಂಬಿ ತುಳುಕದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಈ ವಾರದ ಆರಂಭದಲ್ಲಿ, ಲಾಕ್‌ಡೌನ್ ಜುಲೈ 31ರವರೆಗೆ ವಿಸ್ತರಿಸುವುದಾಗಿ ಬ್ಯಾನರ್ಜಿ ಘೋಷಿಸಿದ್ದರು.