ನವದೆಹಲಿ: ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ಯಾವುದೇ ಡೇಟಾ ನಷ್ಟವಾಗಿಲ್ಲ, ಎಲ್ಲವೂ ಭದ್ರವಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈಚೆಗೆ ಎನ್ಐಸಿಯ ಪ್ರಮುಖ ಭದ್ರತಾ ಉಲ್ಲಂಘನೆಯ ವರದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಈ ಮಾಹಿತಿ ನೀಡಿದ್ದಾರೆ.
"ಮಾಲ್ವೇರ್ ಅಳವಡಸಿದ್ದ ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿದ್ದು, ಎನ್ಐಸಿಯ ದತ್ತಾಂಶಕ್ಕೆ ಯಾವುದೇ ನಷ್ಟವಾಗಿಲ್ಲ. ಈಗಾಗಲೇ ದೆಹಲಿ ಪೊಲೀಸರು ತನಿಖೆ ನಡೆಸಿ ಇದರ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ತನಿಖೆ ಕೂಡ ಕೈಗೊಳ್ಳಲಾಗಿದೆ ಎಂದು ಸುದ್ದಿ ಮಾಧ್ಯಮ ಸಂಸ್ಥೆಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಎನ್ಐಸಿ ಎಂಬುದು ಸೈಬರ್ ಮೂಲ ಸೌಕರ್ಯಗಳನ್ನು ಭದ್ರಪಡಿಸುವ ಜವಾಬ್ದಾರಿ ಹೊಂದಿರುವ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿವೈ) ಅಡಿಯಲ್ಲಿ ಬರುವ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ಇದರ ಮೇಲೆ ಮಾಲ್ವೇರ್ ದಾಳಿ ಮಾಡಿದೆ.
ಪ್ರಾಥಮಿಕ ತನಿಖೆಯಲ್ಲಿ ಬೆಂಗಳೂರಿನ ಸಂಸ್ಥೆಯೊಂದರ ಇಮೇಲ್ ಮಾಲ್ವೇರ್ ಅನ್ನು ರಚಿಸಿದೆ ಎಂದು ಶಂಕಿಸಲಾಗಿದೆ. ಎನ್ಐಸಿಯ ಸೈಬರ್ ಹಬ್ನಲ್ಲಿರುವ ಕಂಪ್ಯೂಟರ್ಗಳು ಭಾರತದ ಭದ್ರತೆ, ನಾಗರಿಕರು ಮತ್ತು ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಾಹಿತಿ ಮತ್ತು ಡೇಟಾವನ್ನು ಒಳಗೊಂಡಿದೆ.
ಅಷ್ಟೇ ಅಲ್ಲದೇ ಪ್ರಧಾನಿ, ರಾಷ್ಟ್ರೀಯ ಭದ್ರತಾ ಸಲಹೆಗಾರು, ಗೃಹ ಸಚಿವರು ಸೇರಿದಂತೆ ಇತರರ ಸುದ್ದಿ ಮೂಲಗಳನ್ನು ಉಲ್ಲೇಖಿಸಿ ಈಚೆಗೆ ವರದಿ ಮಾಡಲಾಗಿತ್ತು. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಇ-ಆಡಳಿತ ಯೋಜನೆಗಳ ಅನುಷ್ಠಾನಕ್ಕೆ ಎನ್ಐಸಿ ನೆರವಾಗಿದೆ. ಇನ್ನೂ ಸರ್ಕಾರಿ ಇಲಾಖೆಗಳಿಗೆ ಸಲಹೆಯನ್ನು ನೀಡಲಾಗುತ್ತದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ, ಸಾಮರ್ಥ್ಯ ವೃದ್ಧಿಗೆ ಮೂಲ ಕಾರಣವಾಗಿದೆ.