ETV Bharat / bharat

ದೇಶದಲ್ಲಾದ ಪ್ರಮುಖ ಅನಿಲ ಸೋರಿಕೆ ಅವಘಡಗಳು ಯಾವುವು ಗೊತ್ತಾ?.. ಇಲ್ಲಿದೆ ಹಿಸ್ಟರಿ!

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಇಂದಿನ ಅನಿಲ ದುರಂತ, ದೇಶದಲ್ಲಾದ ಪ್ರಮುಖ ಅನಿಲ ದುರಂತಗಳನ್ನು ನೆನಪಿಸಿದೆ.

author img

By

Published : May 7, 2020, 2:11 PM IST

Updated : May 7, 2020, 2:38 PM IST

Major gas leak accidents in India
ಅನಿಲ ದುರಂತ

ದೇಶದಲ್ಲಿ ನಡೆದ ಇತ್ತೀಚಿನ ದುರಂತಗಳ ಪಟ್ಟಿ ಹೀಗಿದೆ...

06.02.2020: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಿಂದಾಗಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದರು.

12.05.2019: ಮಹಾರಾಷ್ಟ್ರ ತಾರಾಪುರದ ರಾಸಾಯನಿಕ ಘಟಕದಲ್ಲಿ ವಿಷಕಾರಿ ಅನಿಲವನ್ನು ಉಸಿರಾಡಿ ಘಟಕದ ಮೇಲ್ವಿಚಾರಕ ಸೇರಿದಂತೆ 3 ನೌಕರರು ಮೃತಪಟ್ಟಿದ್ದರು.

03.12.2018: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಸಾಯನಿಕ ಸ್ಥಾವರದಿಂದ ಸೋರಿಕೆಯಾದ ಅಮೋನಿಯಾ ಅನಿಲ ಉಸಿರಾಡಿ 14 ಜನರನ್ನು ಆಸ್ಪತ್ರೆಗೆ ದಾಖಲಾಗಿದ್ದರು.

12.07.2018: ಆಂಧ್ರಪ್ರದೇಶದ ಅನಂತಪುರಂನಲ್ಲಿ ಅನಿಲ ಸೋರಿಕೆಯಿಂದ ಉಕ್ಕಿನ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಆರು ಕಾರ್ಮಿಕರು ಸಾವನ್ನಪ್ಪಿದ್ದರು.

03.07.2018: ಉತ್ತರ ಪ್ರದೇಶದ ಉನ್ನಾವೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾದ ನಂತರ 3 ಮಂದಿ ಸಾವನ್ನಪ್ಪಿ ಇಬ್ಬರು ಗಂಭೀರವಾಗಿದ್ದರು.

03.05.2018: ಗುಜರಾತ್​ನ ಭರೂಚ್ ಜಿಲ್ಲೆಯಲ್ಲಿ ತ್ಯಾಜ್ಯ ಮರುಬಳಕೆ ಘಟಕದಲ್ಲಿ ಅನಿಲ ಸೋರಿಕೆ ಸಂಭವಿಸಿ 3 ಕಾರ್ಮಿಕರ ಸಾವು.

08.05.2017: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ರಾಣಿ ಝಾನ್ಸಿ ಸರ್ವೋದಯ ಕನ್ಯೆ ಬಾಲಕಿಯರ ಶಾಲೆಯ 475 ವಿದ್ಯಾರ್ಥಿಗಳು ಮತ್ತು ಒಂಬತ್ತು ಶಿಕ್ಷಕರು ಆಸ್ಪತ್ರೆಗೆ ದಾಖಲಾಗಿದ್ದರು.

15.03.2017: ಕೋಲ್ಡ್ ಸ್ಟೋರೇಜ್‌ನ ಗ್ಯಾಸ್ ಚೇಂಬರ್‌ನಿಂದ ಅಮೋನಿಯಾ ಸೋರಿಕೆಯಾದ ಪರಿಣಾಮ ಕಟ್ಟಡದ ಮೇಲ್ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿತ್ತು.

03.11.2016:ಗುಜರಾತ್ ನರ್ಮದಾ ಕಣಿವೆ ರಸಗೊಬ್ಬರಗಳು ಮತ್ತು ರಾಸಾಯನಿಕ ಲಿ(ಜಿಎನ್‌ಎಫ್‌ಸಿ). ರಾಸಾಯನಿಕ ಘಟಕದಲ್ಲಿವಿಷಕಾರಿ ರಂಜಕದ ಅನಿಲ ಸೋರಿಕೆಯಾಗಿ, ಭರೂಚ್​ನ ಹಳ್ಳಿಯೊಂದರ 4 ಕಾರ್ಮಿಕರು ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದರು.

2016 : ಗುಜರಾತ್‌ನ ವಡೋದರಾ ಜಿಲ್ಲೆಯ ಪೋರ್ ಗ್ರಾಮದಲ್ಲಿ ಸಿಲಿಂಡರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

13.07.2014: ಛತ್ತೀಸ್​ಗಢದ ಭಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಅನಿಲ ಸೋರಿಕೆಯಿಂದ ಉಪ ವ್ಯವಸ್ಥಾಪಕ ಬಿ.ಕೆ. ಸಿಂಘಾಲ್ ಮತ್ತು ಎನ್‌.ಕೆ. ಕಟಾರಿಯಾ ಸೇರಿದಂತೆ 5 ಉನ್ನತ ಅಧಿಕಾರಿಗಳು ಸಾವನ್ನಪ್ಪಿದ್ದರು. ಘಟನೆಯಲ್ಲಿ 50 ಜನರು ಗಾಯಗೊಂಡಿದ್ದಾರೆ.

27.08.2014: ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ನಡೆದ ವೆಲ್ಡಿಂಗ್ ಕಾರ್ಯಾಗಾರದಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿ, 50 ಮಂದಿ ಗಾಯಗೊಂಡಿದ್ದರು.

07.08.2014: ಕೇರಳದ ಕೊಲ್ಲಂನಲ್ಲಿ ಸರ್ಕಾರಿ ಸ್ವಾಮ್ಯದ ಸ್ಥಾವರದಿಂದ ಅನಿಲ ಸೋರಿಕೆಯಾಗಿ 70 ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಸ್ಥಾವರದಿಂದ ಹೊರಹೊಮ್ಮಿದ ವಿಷಕಾರಿ ಹೊಗೆಯನ್ನು ಉಸಿರಾಡಿದ ನಂತರ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು.

05.06.2014: ತಮಿಳುನಾಡಿನ ಟುಟಿಕಾರಿನ್​​ನಲ್ಲಿ 'ನಿಲಾ' ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಪೈಪ್​ಲೈನ್ ​​ಸ್ಫೋಟಗೊಂಡು 54 ಮಹಿಳೆಯರು ಪ್ರಜ್ಞೆ ತಪ್ಪಿದ್ದರು.

18.03.2014: ತಮಿಳುನಾಡಿನ ಈರೋಡ್​ನಲ್ಲಿ ವಿಷಕಾರಿ ಅನಿಲವನ್ನು ಉಸಿರಾಡಿ ಡೈಯಿಂಗ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಉಸಿರುಗಟ್ಟಿಸಿ ಸಾವನ್ನಪ್ಪಿದ್ದರು.

23.03.2013: ಸ್ಥಾವರದಿಂದ ಹೊರಹೊಮ್ಮಿದ ಸಲ್ಫರ್ ಡೈಆಕ್ಸೈಡ್ ಎನ್ನಲಾದ ವಿಷಕಾರಿ ರಾಸಾಯನಿಕ ಅನಿಲವು ಜನರಿಗೆ ಉಸಿರುಗಟ್ಟುವಂತೆ ಮಾಡಿ ತಮಿಳುನಾಡಿನ ತೂತುಕುಡಿ ಗ್ರಾಮದ ಒಬ್ಬರು ಸಾಯುವಂತೆ ಮಾಡಿತ್ತು.

02.08.2011: ಕರ್ನಾಟಕದ ಜಿಂದಾಲ್ ಸ್ಟೀಲ್ ಪ್ಲಾಂಟ್‌ನಲ್ಲಿ ಸೋರಿಕೆಯಾದ ವಿಷಕಾರಿ ಅನಿಲ ಉಸಿರಾಡಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು.

16.07.2010: ಪಶ್ಚಿಮ ಬಂಗಾಳದ ದುರ್ಗಾಪುರ ಉಕ್ಕಿನ ಸ್ಥಾವರದಲ್ಲಿ ಇಂಗಾಲದ ಮಾನಾಕ್ಸೈಡ್ ಉಸಿರಾಡಿ 25 ಜನರು ಅನಾರೋಗ್ಯಕ್ಕೆ ತುತ್ತಾಗಿದ್ದರು.

12.11.2006: ಗುಜರಾತ್​ನ ಭರೂಚ್‌ನ ಅಂಕಲೇಶ್ವರ ಪಟ್ಟಣದ ತೈಲ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ 3 ಜನರು ಸಾವನ್ನಪ್ಪಿದ್ದರು.

02.12.1984: ದೇಶದ ಅತಿ ದೊಡ್ಡ ಅನಿಲ ದುರಂತವಾದ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಸ್ಥಾವರದಲ್ಲಿ 30 ಟನ್‌ಗಿಂತಲೂ ಹೆಚ್ಚು ವಿಷಕಾರಿ ಅನಿಲ ಸೋರಿಕೆಯಾಗಿ ಮಹಾದುರಂತ ಸಂಭವಿಸಿತ್ತು. ಘಟನೆಯಿಂದಾಗಿ ಸಾವಿನ ಕನಿಷ್ಠ 3,787 ಜನಸಾವನ್ನಪ್ಪಿದ್ದರು. ಈ ಅನಿಲ ಸೋರಿಕೆಯ ಪರಿಣಾಮವಾಗಿ ಒಟ್ಟು 16,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Last Updated : May 7, 2020, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.