ಹೈದರಾಬಾದ್: ಏರ್ ಫೋರ್ಸ್ ಅಕಾಡೆಮಿ ಬಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ತೆಲಂಗಾಣದ ಮಲ್ಕಾಜಗಿರಿ ಜಿಲ್ಲೆಯ ಡುಂಡಿಗಲ್ನಲ್ಲಿರುವ ಏರ್ ಪೋರ್ಸ್ ಅಕಾಡೆಮಿ ಸಮೀಪದ ಕೆಮಿಕಲ್ ಕಾರ್ಖಾನೆಯಲ್ಲಿ ಈ ಅವಘಡ ನಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಕಳೆದ ರಾತ್ರಿಯಷ್ಟೇ ಆಂಧ್ರದ ಶ್ರೀಶೈಲಂ ಜಲವಿದ್ಯುದಾಗಾರದಲ್ಲಿ ಅಗ್ನಿ ದುರಂತ ಸಂಭವಿದ್ದನ್ನು ಇಲ್ಲಿ ಸ್ಮರಿಸಬಹುದು.