ETV Bharat / bharat

ಮನುಕುಲದ ಎಲ್ಲ ಸಮಸ್ಯೆಗಳಿಗೆ ಬಾಪೂರ 3 ತತ್ತ್ವ ಗಳಲ್ಲಿ ಪರಿಹಾರವಿದೆ

ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದೂ ಅಧ್ಯಾತ್ಮಿಕ ಮಾರ್ಗವನ್ನು ಬಿಟ್ಟಿರಲಿಲ್ಲ. ಗಾಂಧಿಯವರ ಹತ್ಯೆಯಾಗುವ ಮುನ್ನ ಕೊನೆಯ ಬಾರಿ ಅವರ ಸಂದರ್ಶನ ಮಾಡಿದವರು 'ಲೈಫ್' ನಿಯತಕಾಲಿಕೆಯ ಛಾಯಾಗ್ರಾಹಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಮಾರ್ಗರೆಟ್ ಬೌರ್ಕೆ. ತಮ್ಮ 'ಹಾಫ್ ವೇ ಟು ಫ್ರೀಡಮ್' ಪುಸ್ತಕದಲ್ಲಿ, 'ನಿರಾಕರಿಸಲಾಗದ  ಈ ಶ್ರೇಷ್ಠ ಮನುಷ್ಯನ ಉತ್ತಮವಾದ ಭಾಗಯಾವುದೆಂದು ತೆಗೆದುಕೊಳ್ಳಲು ನನಗೆ ಎರಡು ವರ್ಷಗಳು ಬೇಕಾಯಿತು' ಎಂದಿದ್ದಾರೆ. 'ಸಂಪತ್ತು, ಆಸ್ತಿ, ಅಧಿಕೃತ ಹುದ್ದೆ, ಶೈಕ್ಷಣಿಕ ಸ್ಥಾನಮಾನ, ವೈಜ್ಞಾನಿಕ ಸಾಧನೆ ಅಥವಾ ಕಲಾತ್ಮಕವಾದ ಉಡುಗೊರೆಗಳಿಲ್ಲದ ತೀರಾ ಖಾಸಗಿ ಪ್ರಜೆ' ಎಂದು ಲೇಖಕ ಲೂಯಿಸ್ ಫಿಷರ್ ಅವರು ತಮ್ಮ 'ಲೈಫ್​ ಆಫ್​ ಮಹಾತ್ಮ ಗಾಂಧಿ' ಪುಸ್ತಕದಲ್ಲಿ ಬರೆದಿದ್ದಾರೆ. ಗಾಂಧಿ ಸಾವನ್ನಪಿದ ಬಳಿಕ ದೇಶ- ವಿದೇಶಗಳಿಂದ ಸಹಾನುಭೂತಿಯ 3441 ಸಂದೇಶಗಳು ಬಂದಿದ್ದವು.

ಸಾಂದರ್ಭಿಕ ಚಿತ್ರ
author img

By

Published : Sep 27, 2019, 6:58 AM IST

ಮಹಾತ್ಮ ಎಂದು ಕರೆಯಲ್ಪಡುವ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ (1869-1948) ಅವರು ಅಸಾಧಾರಣ ವ್ಯಕ್ತಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಸಾಧನೆ ಮಾಡಿದರು. ಅಹಿಂಸೆಯ ಮೂಲಕ ರಾಜಕೀಯ ಚಳವಳಿ ಆರಂಭಿಸಿದರು. ಆಡಳಿತ ಮತ್ತು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಋಷಿ- ಸಂತರಂತೆ ದೂರನಿಂತ ತಮ್ಮ ಕಾರ್ಯ ಮಾಡಿದರು.

ಮಹಾತ್ಮ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿದ್ದೂ ಆಧ್ಯಾತ್ಮಿಕ ಮಾರ್ಗವನ್ನು ಬಿಟ್ಟಿರಲಿಲ್ಲ. ಗಾಂಧಿಯವರ ಹತ್ಯೆಯಾಗುವ ಮುನ್ನ ಕೊನೆಯ ಬಾರಿ ಅವರ ಸಂದರ್ಶನ ಮಾಡಿದವರು 'ಲೈಫ್' ನಿಯತಕಾಲಿಕೆಯ ಛಾಯಾಗ್ರಾಹಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಮಾರ್ಗರೆಟ್ ಬೌರ್ಕೆ. ತಮ್ಮ 'ಹಾಫ್ ವೇ ಟು ಫ್ರೀಡಮ್' ಪುಸ್ತಕದಲ್ಲಿ, 'ನಿರಾಕರಿಸಲಾಗದ ಈ ಶ್ರೇಷ್ಠ ಮನುಷ್ಯನ ಉತ್ತಮವಾದ ಭಾಗಯಾವುದೆಂದು ತೆಗೆದುಕೊಳ್ಳಲು ನನಗೆ ಎರಡು ವರ್ಷಗಳು ಬೇಕಾಯಿತು' ಎಂದಿದ್ದಾರೆ.

'ಸಂಪತ್ತು, ಆಸ್ತಿ, ಅಧಿಕೃತ ಹುದ್ದೆ, ಶೈಕ್ಷಣಿಕ ಸ್ಥಾನಮಾನ, ವೈಜ್ಞಾನಿಕ ಸಾಧನೆ ಅಥವಾ ಕಲಾತ್ಮಕವಾದ ಉಡುಗೊರೆಗಳಿಲ್ಲದ ತೀರಾ ಖಾಸಗಿ ಪ್ರಜೆ' ಎಂದು ಲೇಖಕ ಲೂಯಿಸ್ ಫಿಷರ್ ಅವರು ತಮ್ಮ 'ಲೈಫ್​ ಆಫ್​ ಮಹಾತ್ಮ ಗಾಂಧಿ' ಪುಸ್ತಕದಲ್ಲಿ ಬರೆದಿದ್ದಾರೆ. ಗಾಂಧಿ ಸಾವನ್ನಪಿದ ಬಳಿಕ ದೇಶ- ವಿದೇಶಗಳಿಂದ ಸಹಾನುಭೂತಿಯ 3,441 ಸಂದೇಶಗಳು ಬಂದಿದ್ದವು.

ಗಾಂಧಿ ಅಹಿಂಸೆಯ ಸಾಕಾರವಾಗಿದ್ದರಿಂದ ಅವರು ಅದನ್ನು ತಮ್ಮ ದೈನಂದಿನ ಕಾರ್ಯಗಳಲ್ಲಿ ತೋರ್ಪಡಿಸುತ್ತಿದ್ದರು. ಒಬ್ಬ ವಿದೇಶಿ ಲೇಖಕ ಜಗತ್ತಿನ ನಾಯಕರನ್ನು 'ವಹಿವಾಟು' ಮತ್ತು 'ಪರಿವರ್ತನೆಯ' ನಾಯಕರೆಂದು ಎರಡು ರೀತಿಯಲ್ಲಿ ವರ್ಗಿಕರಿಸಿದ್ದಾರೆ. 'ವಹಿವಾಟಿನ' ನಾಯಕನ ಅಧಿಕಾರ ಮತ್ತು ದಬ್ಬಾಳಿಕೆಯಿಂದಿರುತ್ತಾನೆ. 'ಪರಿವರ್ತನೆ'ಯ ನಾಯಕ; ಸಾರ್ವಜನಿಕ ವರ್ತನೆಗಳು ಮತ್ತು ನಡವಳಿಕೆಯ ರೂಪಾಂತರದ ಮೂಲಕ ಬದಲಾವಣೆ ಸೃಷ್ಟಿಸುತ್ತಾನೆ. ಹೀಗಾಗಿ, ಗಾಂಧೀಜಿಯವರು ಎರಡನೇ ವರ್ಗದ ನಾಯಕ. ಪರಿವರ್ತಕ ನಾಯಕರಾಗಿದ್ದರಿಂದಲೇ ವಿಶ್ವದ ಯಾವುದೇ ಸಮಸ್ಯೆಗೆ ಅವರು ಪರಿಹಾರ ನೀಡಬಲ್ಲವರಾಗಿದ್ದಾರೆ.

ಗಾಂಧೀಜಿಯವರು ತಮ್ಮ ಜೀವನ ಉದಕ್ಕೂ ಯಾವುದೇ ಸಮಸ್ಯೆ ಬಂದರು ತಮ್ಮ ಸಿದ್ಧಾಂತದ ಮೂರು ತತ್ವಗಳನ್ನೇ ಪ್ರಚಾರ ಮಾಡಿದರು. ಸ್ವರಾಜ್ ಅಥವಾ ಸ್ವರಾಜ್ಯ, ವಿರೋಧಿಗಳು ಸೇರಿದಂತೆ ಇತರರಿಗೆ ಸಹಾನುಭೂತಿಯ ಸೇವೆ ಮತ್ತು ಪ್ರಾರ್ಥನೆ. 1) ರಾಷ್ಟ್ರಗಳ ಒಳಗಿನ ಮತ್ತು ರಾಷ್ಟ್ರಗಳಲ್ಲಿನ ದೈಹಿಕ ಹಿಂಸೆ, 2) ಬಡತನ, ಅನಕ್ಷರತೆ ಮತ್ತು ಮಹಿಳೆಯರ ಮತ್ತು ಮಕ್ಕಳ ಅಗತ್ಯತೆಗಳಂತಹ ಸಾಮಾಜಿಕ-ಆರ್ಥಿಕ ಸಮಸ್ಯೆಗಳು, 3) ಭೂಮಿಯ ವಾತಾವರಣ ಹಾಗೂ 4) ನೈತಿಕ ನಡವಳಿಕೆಗಳನ್ನು ಗಾಂಧಿಯ ಈ ಮೂರು ತತ್ತ್ವಗಳ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಅಮೆರಿಕದ ಪ್ರಾಧ್ಯಾಪಕ ಸ್ಟೀಫನ್ ಹೇ ಬರೆದಿದ್ದಾರೆ.

ನಾಯಕರಾಗಿದ್ದ ಗಾಂಧಿಯವರು ನಿರ್ಭಯತೆ, ಸ್ವಾತಂತ್ರ್ಯದ ಬಗೆಗಿನ ಉತ್ಸಾಹ ಮತ್ತು ಅದನ್ನು ಸಾಮರ್ಥ್ಯದಿಂದ ಸಾಧಿಸಬಹುದೆಂದು ಜನಸಾಮಾನ್ಯರೊಂದಿಗೆ ನಿರಂತರ ಸಂವಹನ ನಡೆಸಿದರು. ಈ ಮೂಲಕ ಪ್ರಬಲ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಪ್ರಭಾವ ಬೀರಿ ಅವರನ್ನು ದೇಶ ತೊರೆಯುವಂತೆ ಮಾಡಿದರು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗಾಣಿಸಲು ಗಾಂಧಿಯವರು ಸತ್ಯಾಗ್ರಹದ ಹಾದಿ ಹಿಡಿದರು. ಸಾಮಾನ್ಯ ಬಟ್ಟೆ ಧರಿಸಿದ ವ್ಯಕ್ತಿ ತನ್ನ ದೇಶವನ್ನು ಸ್ವಾತಂತ್ರ್ಯಗೊಳಿಸಿದ ಪ್ರಪಂಚದ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತಾನೆ ಎಂದು ಬ್ರಿಟಿಷರು ಅರ್ಥಮಾಡಿಕೊಂಡಿರಲಿಲ್ಲ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.