ETV Bharat / bharat

ಸಂತ್ರಸ್ತರನ್ನು ಬಿಟ್ಟು ಚುನಾವಣಾ ಪ್ರಚಾರ ನಡೆಸಿದ್ದ ಬಿಎಸ್​​ವೈಗೆ ಮುಖಭಂಗ...ಸಿದ್ದರಾಮಯ್ಯಗೆ ಗೆಲುವಿನ ನಗೆ.. - Congress loss

ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹಿನ್ನೆಲೆ ಗಡಿಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪರ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಗೆಲುವಿನ ನಗೆ ಬೀರಿದ್ದಾರೆ.

maharastra-election-result
author img

By

Published : Oct 24, 2019, 7:08 PM IST

ಹೈದರಾಬಾದ್: ನೆರೆ ಸಂತ್ರಸ್ತರನ್ನು ಬದಿಗೊತ್ತಿ ನೆರೆ ರಾಜ್ಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗಡಿನಾಡ ಕನ್ನಡಿಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್​ ಪರ ಪ್ರಚಾರ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದ್ದಾರೆ.

ಗಡಿ ಭಾಗದ ದಕ್ಷಿಣ, ಪಶ್ಚಿಮ ಮಹಾರಾಷ್ಟ್ರದ 30 ವಿಧಾನಸಭೆ ಕ್ಷೇತ್ರಗಳಲ್ಲಿ ಕನ್ನಡಿಗರ ಮತಗಳು ನಿರ್ಣಾಯಕ. ಗಡಿಭಾಗದ ಕನ್ನಡಿಗರನ್ನು ಸೆಳೆಯಲು ರಾಜ್ಯದ ಎರಡೂ ಪಕ್ಷಗಳ ನಾಯಕರು ದಂಡೇ ವಿಧಾನಸಭೆ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿತ್ತು. ಆದರೆ, ಬಿಜೆಪಿ ಈ ಭಾಗದಲ್ಲಿ ಕೈ ಸುಟ್ಟುಕೊಂಡಿದ್ದು, ಕಾಂಗ್ರೆಸ್​ ಗೆಲುವಿನ ನಗೆ ಬೀರಿದೆ.

ಕಳೆದ ಬಾರಿ ಈ ಮತ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೀಗ ಅದು ಉಲ್ಟಾ ಆಗಿದ್ದು, ಬಿಜೆಪಿ ಗೆಲುವು ಸಾಧಿಸಲು ವಿಫಲವಾಗಿದೆ.‌ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿದಿರುವುದಕ್ಕೆ ಇನ್ನೊಂದು ಸಾಕ್ಷಿ ಎಂಬ ಮಾತುಗಳು ಈ ಭಾಗದ ಜನರಿಂದ ಕೇಳಿ ಬರುತ್ತಿದೆ. ಮಹಾರಾಷ್ಟ್ರ ಸರ್ಕಾರ ನೀಡಿದ್ದ ಪ್ರಣಾಳಿಕೆಯಂತೆ ನಡೆದುಕೊಳ್ಳದೇ ಇರುವುದು ಬಿಜೆಪಿ ಸೋಲಲು ಕಾರಣ. ಮಹಾರಾಷ್ಟ್ರಕ್ಕೆ ಕೃಷ್ಣಾ ನದಿ ನೀರನ್ನು ಹರಿಸುವುದಾಗಿ ಬಿಎಸ್​ವೈ ಹೇಳಿದ್ದರು. ಆದರೆ, ಫಲ ನೀಡಿಲ್ಲ. ಗಡಿಭಾಗದಲ್ಲೂ ಪ್ರವಾಹ ಉಂಟಾಗಿತ್ತು. ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ.

ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಲ್ಲಿಗೆ ದೌಡಾಯಿಸಿದ್ದರು. ಬಿಜೆಪಿ ಪರ ಯಡಿಯೂರಪ್ಪ, ಲಕ್ಷ್ಮಣ ಸವದಿ ಮತ್ತು ತಂಡಗಳು ಈ ಭಾಗದಲ್ಲಿ ದೊಡ್ಡ ಪ್ರಮಾಣದ ಪ್ರಚಾರ, ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದ್ದವು. ಇದೇ ರೀತಿ ಕಾಂಗ್ರೆಸ್‌ ಪರ ಸಿದ್ದರಾಮಯ್ಯ ಸೇರಿ ಪ್ರಭಾವಿ ನಾಯಕರ ಪ್ರಚಾರಕರ ಪಟ್ಟಿ ಸಿದ್ಧಪಡಿಸಿಕೊಂಡಿತ್ತು.

ಬಿಎಸ್​​ವೈ ಕೂಡ ಪ್ರಚಾರ ನಡೆಸಿದ ಕೊಲ್ಹಾಪುರ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳು ಪೂರ್ತಿ ಸೋಲನ್ನು ಅನುಭವಿಸಿವೆ. ಸಾಂಗ್ಲಿ ಜಿಲ್ಲೆಯ ಮಿರಜ್, ಜತ್ತ, ಕವಟೇ ಮಹಾಂಕಾಳ, ಸೊಲ್ಲಾಪುರ ಸಿಟಿ, ಸಾಂಗೋಲಾ, ಪಂಡರಪುರ, ಮಂಗಳವೇಡಾ, ಬಾರ್ಶಿ, ಅಕ್ಕಲಕೋಟ ಒಳಗೊಂಡ 5-6 ತಾಲೂಕು, ಲಾತೂರ್​, ಉಸ್ಮಾನಾಬಾದ್‌, ಬೀಡ್‌ ಜಿಲ್ಲೆಗಳ ತಲಾ 2 ತಾಲೂಕು, ಕೊಲ್ಹಾಪುರ ಜಿಲ್ಲೆಯ ಚಂದಗಡ, ಶಿರೋಳ ಮತ್ತು ಕಾಗಲ ತಾಲೂಕಿನಲ್ಲಿ ಗಡಿ ಭಾಗದ ಕನ್ನಡಿಗರಿದ್ದಾರೆ.

Intro:Body:

ಕಳೆದ ಬಾರಿ ಈ ಮತ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೀಗ ಅದು ಉಲ್ಟಾ ಆಗಿದ್ದು, ಬಿಜೆಪಿ ಗೆಲುವು ಸಾಧಿಸಲು ವಿಫಲವಾಗಿದೆ.‌ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿದಿರುವುದಕ್ಕೆ ಇನ್ನೊಂದು ಸಾಕ್ಷಿ. ಮಹಾರಾಷ್ಟ್ರ ಸರ್ಕಾರ ನೀಡಿದ್ದ ಪ್ರಣಾಳಿಕೆಯಂತೆ ನಡೆದುಕೊಳ್ಳದೇ ಇರುವುದು ಬಿಜೆಪಿ ಸೋಲಲು ಕಾರಣ. ಮಹಾರಾಷ್ಟ್ರಕ್ಕೆ ಕೃಷ್ಣಾ ನದಿ ನೀರನ್ನು ಹರಿಸುವುದಾಗಿ ಬಿಎಸ್​ವೈ ಹೇಳಿದ್ದರು. ಆದರೆ, ಫಲ ನೀಡಿಲ್ಲ. ಗಡಿಭಾಗದಲ್ಲೂ ಪ್ರವಾಹ ಉಂಟಾಗಿತ್ತು. ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ.

ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಲ್ಲಿಗೆ ದೌಡಾಯಿಸಿದ್ದರು. ಬಿಜೆಪಿ ಪರ ಯಡಿಯೂರಪ್ಪ, ಲಕ್ಷ್ಮಣ ಸವದಿ ಮತ್ತು ತಂಡಗಳು ಈ ಭಾಗದಲ್ಲಿ ದೊಡ್ಡ ಪ್ರಮಾಣದ ಪ್ರಚಾರ, ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಿದ್ದವು. ಇದೇ ರೀತಿ ಕಾಂಗ್ರೆಸ್‌ ಪರ ಸಿದ್ದರಾಮಯ್ಯ ಸೇರಿ ಪ್ರಭಾವಿ ನಾಯಕರ ಪ್ರಚಾರಕರ ಪಟ್ಟಿ ಸಿದ್ಧಪಡಿಸಿಕೊಂಡಿತ್ತು.

ಬಿಎಸ್​​ವೈ ಕೂಡ ಪ್ರಚಾರ ನಡೆಸಿದ ಕೊಲ್ಹಾಪುರ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳು ಪೂರ್ತಿ ಸೋಲನ್ನು ಅನುಭವಿಸಿವೆ. ಸಾಂಗ್ಲಿ ಜಿಲ್ಲೆಯ ಮಿರಜ್, ಜತ್ತ, ಕವಟೇ ಮಹಾಂಕಾಳ, ಸೊಲ್ಲಾಪುರ ಸಿಟಿ, ಸಾಂಗೋಲಾ, ಪಂಡರಪುರ, ಮಂಗಳವೇಡಾ, ಬಾರ್ಶಿ, ಅಕ್ಕಲಕೋಟ ಒಳಗೊಂಡ 5-6 ತಾಲೂಕು, ಲಾತೂರ, ಉಸ್ಮಾನಾಬಾದ್‌, ಬೀಡ್‌ ಜಿಲ್ಲೆಗಳ ತಲಾ 2 ತಾಲೂಕು, ಕೊಲ್ಹಾಪುರ ಜಿಲ್ಲೆಯ ಚಂದಗಡ, ಶಿರೋಳ ಮತ್ತು ಕಾಗಲ ತಾಲೂಕಿನಲ್ಲಿ ಗಡಿ ಭಾಗದ ಕನ್ನಡಿಗರಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.