ಥಾಣೆ: ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಥಾಣೆ ಜಿಲ್ಲೆಯ ಕಲ್ಯಾಣ್ ಮತ್ತು ಡೊಂಬಿವಿಲಿ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
ಅಗತ್ಯ ಸರಕು ಅಂಗಡಿಗಳಿಗೆ ಮಾತ್ರ ನಿಗದಿತ ಗಂಟೆಗಳ ತೆರೆಯಲು ಅವಕಾಶ ಕಲ್ಪಿಸಿ ಗುರುವಾರ ಮಧ್ಯರಾತ್ರಿಯಿಂದ 10 ದಿನಗಳ ಕಾಲ ಲಾಕ್‌ಡೌನ್ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಸಾರ್ವಜನಿಕ ಸಾರಿಗೆ ವಾಹನಗಳನ್ನು ಜುಲೈ 12 ರವರೆಗೆ ನಿರ್ಬಂಧಿಸಲಾಗಿದ್ದು, ತರಕಾರಿ ಮತ್ತು ಇತರ ತಿನ್ನಬಹುದಾದ ವಸ್ತುಗಳು ಪ್ರತಿದಿನ ಬೆಳಗ್ಗೆ 7 ರಿಂದ 11 ರವರೆಗೆ ಮಾತ್ರ ಲಭ್ಯವಿರುತ್ತವೆ ಎಂದು ಸರ್ಕಾರ ತಿಳಿಸಿದೆ.
ಜುಲೈ 12 ರ ನಂತರ ಲಾಕ್‌ಡೌನ್ ಅನ್ನು ತೆಗೆದು ಹಾಕಲಾಗುತ್ತದೆ. ಇತರ ಸೇವೆಗಳನ್ನು ಆಗ ಪುನಾರಂಭಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಕೋವಿಡ್-19 ಹಾಟ್‌ಸ್ಪಾಟ್ ಆಗಿರುವ ಮುಂಬೈನ ಹಲವಾರು ಪ್ರದೇಶಗಳಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್ ವಿಧಿಸಿ ಆದೇಶ ಹೊರಡಿಸಿದೆ.