ETV Bharat / bharat

ಮೂರನೆಯವರಿಗೆ 'ಮಹಾ' ರಾಜ್ಯಪಾಲರ ಆಹ್ವಾನ.. ಸರ್ಕಾರ ರಚಿಸುತ್ತಾ ಎನ್​ಸಿಪಿ!

author img

By

Published : Nov 11, 2019, 10:07 PM IST

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್​ಸಿಪಿಗೆ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.

ಸರ್ಕಾರ ರಚಿಸುತ್ತಾ ಎನ್​ಸಿಪಿ

ಮುಂಬೈ: ದಿನದಿಂದ ದಿನಕ್ಕೆ ಮಹಾರಾಷ್ಟ್ರ ಸರ್ಕಾರ ರಚನೆ ಕೂತೂಹಲ ಮೂಡಿಸುತಿದ್ದು ಬಿಜೆಪಿ, ಶಿವಸೇನೆ ನಂತರ ರಾಜ್ಯಪಾಲರು ಎನ್​ಸಿಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದಾರೆ.

  • Mumbai: Ajit Pawar, Chhagan Bhujbal and other Nationalist Congress Party (NCP) leaders met Maharashtra Governor Bhagat Singh Koshyari at Raj Bhavan in Mumbai. pic.twitter.com/UygjGd4rxQ

    — ANI (@ANI) November 11, 2019 " class="align-text-top noRightClick twitterSection" data=" ">

ರಾಜ್ಯಪಾಲರನ್ನ ಭೇಟಿ ಮಾಡಿದ ನಂತರ ಮಾತನಾಡಿರುವ ಎನ್​ಸಿಪಿ ನಾಯಕ ಜಯಂತ್ ಪಾಟೀಲ್ ರಾಜ್ಯಪಾಲರ ಆಹ್ವಾನದ ಮೇರೆಗೆ ಅವರನ್ನ ಭೇಟಿ ಮಾಡಿದ್ದೇವೆ. ಭೇಟಿ ವೇಳೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಸರ್ಕಾರ ರಚನೆ ಮಾಡಲು ಎನ್​ಸಿಪಿ ಪಕ್ಷವನ್ನ ಆಹ್ವಾನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಾಧ್ಯವಾದಷ್ಟು ಬೇಗ ನಿಮಗೆ ನಮ್ಮ ನಿಲುವು ತಿಳಿಸುತ್ತೆವೆ ಎಂದು ಹೇಳಿದ್ದೇವೆ. ನಮ್ಮ ಮಿತ್ರ ಪಕ್ಷವಾದ ಕಾಂಗ್ರೆಸ್ ಜೊತೆ ಚರ್ಚೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಜಯಂತ್ ಪಾಟೀಲ್ ತಿಳಿಸಿದ್ದಾರೆ.

  • Jayant Patil, NCP: As per the procedure Governor has given us the letter (to stake claim to form govt ) being the 3rd largest party in #Maharashtra. We suggested him that we'll have to talk to our allies&we'll get back to him as early as possible. Deadline is 8.30 pm tomorrow. pic.twitter.com/z91Imbbe8E

ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದರು. ಆದರೆ ನಾವು ಸರ್ಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದರು. ನಂತರ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ ಪಕ್ಷಕ್ಕೆ ಸರ್ಕಾರ ರಚನೆ ಮಾಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಆಹ್ವಾನ ನೀಡಿದ್ದರು. ಇಂದು ರಾಜ್ಯಪಾಲರ ಬಳಿ ಮೂರು ದಿನ ಕಾಲಾವಾಕಾಶ ನೀಡುವಂತೆ ಶಿವಸೇನೆ ಬೇಡಿಕೆ ಸಲ್ಲಿಸಿತ್ತು.

ಶಿವಸೇನೆ ನಾಯಕರ ಬೇಡಿಕೆ ತಿರಸ್ಕರಿಸಿರುವ ರಾಜ್ಯಪಾಲರು ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎನ್​ಸಿಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದು, ಮಂಗಳವಾರ ರಾತ್ರಿ 8:30ರ ಒಳಗೆ ತಮ್ಮ ನಿಲುವು ತಿಳಿಸುವಂತೆ ಗಡುವು ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.