ಮುಂಬೈ: ಸೊಲ್ಲಾಪುರ ಜಿಲ್ಲೆಯ ಕರ್ಮಾಲಾ ತಾಲೂಕಿನಲ್ಲಿ ಬ್ಯಾಂಕ್ನ ಕಟ್ಟಡದ ಸ್ಲಾಬ್ ಕುಸಿದು ಅವಶೇಷಗಳಿಡಿ 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಕರ್ಮಾಲ ಬ್ರಾಂಚ್ನ ಕಟ್ಟಡದ ಮುಂಭಾಗದ ಸ್ಲಾಬ್ ಇಂದು ಮಧ್ಯಾಹ್ನ 12:30ಕ್ಕೆ ಕುಸಿದಿದೆ. ಬ್ಯಾಂಕ್ನೊಳಗೆ ಸಿಬ್ಬಂದಿ ಹಾಗೂ ಗ್ರಾಹಕರು ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ಪರಿಶೀಲಿಸುತ್ತಿರುವ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ವಿಶಾಲ್ ಹಿರೆ, ಮಧ್ಯಾಹ್ನ 1:15ರವರೆಗೆ ಅವಶೇಷಗಳಡಿ ಸಿಲುಕಿದ್ದ 7 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದರು.
ರಕ್ಷಣಾ ಪಡೆಯ ಜತೆ ಸ್ಥಳೀಯರು ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.