ETV Bharat / bharat

ಅ.​​ 25ರಿಂದ ಮಹಾರಾಷ್ಟ್ರದಲ್ಲಿ ಜಿಮ್​, ಫಿಟ್ನೆಸ್​ ಸೆಂಟರ್​​ ಆರಂಭ: ಕಂಡೀಷನ್​ ಅಪ್ಲೈ! - ಮಹಾರಾಷ್ಟ್ರದಲ್ಲಿ ಜಿಮ್​ ಓಪನ್​​

ಮಹಾರಾಷ್ಟ್ರದಲ್ಲಿ ದಸರಾ ಮುಕ್ತಾಯದ ಬಳಿಕ ಜಿಮ್ ಹಾಗೂ ಫಿಟ್ನೆಸ್​ ಸೆಂಟರ್​ ರೀ ಓಪನ್​ ಆಗಲಿವೆ.

Maharashtra Allows Gyms
Maharashtra Allows Gyms
author img

By

Published : Oct 17, 2020, 10:03 PM IST

ಮುಂಬೈ: ಅಕ್ಟೋಬರ್​​ 25ರಿಂದ ಮಹಾರಾಷ್ಟ್ರದಲ್ಲಿ ಜಿಮ್​, ಫಿಟ್ನೆಸ್​​ ಸೆಂಟರ್​ ಪುನಾರಂಭಗೊಳ್ಳಲಿದ್ದು, ಅದಕ್ಕಾಗಿ ಅಲ್ಲಿನ ಸರ್ಕಾರ ಮಾರ್ಗಸೂಚಿ ರಿಲೀಸ್​ ಮಾಡಿದೆ.

ದಸರಾ ಆಚರಣೆ ಬಳಿಕ ರಾಜ್ಯದಲ್ಲಿ ಜಿಮ್​​​​ ಓಪನ್​ ಆಗಲಿವೆ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತಿಳಿಸಿದ್ದು, ಕೆಲವೊಂದು ನಿರ್ಬಂಧ ವಿಧಿಸಿದೆ. ಉದ್ಧವ್​ ಠಾಕ್ರೆ ಇಂದು ರಾಜ್ಯದ ವಿವಿಧ ಜಿಮ್​ ಮತ್ತು ಫಿಟ್ನೆಸ್​ ​ ಕೇಂದ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಆದರೆ, ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್​ ಬಳಕೆ ಸೇರಿ ಸುರಕ್ಷತಾ ಕ್ರಮ ಕಡ್ಡಾಯವಾಗಿವೆ. ತರಬೇತುದಾರರು, ನೌಕರರ ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ಕಡೆ ಈಗಾಗಲೇ ಸಿನಿಮಾ ಹಾಲ್​, ಧಾರ್ಮಿಕ ಸ್ಥಳ, ಈಜುಕೊಳ ಪುನಾರಂಭ ಮಾಡಲು ಅವಕಾಶ ನೀಡಲಾಗಿದೆ. ಮುಂಬೈನಲ್ಲಿ ಅಕ್ಟೋಬರ್​​​ 19ರಿಂದ ಮೆಟ್ರೋ ರೈಲು ಆರಂಭಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.