ETV Bharat / bharat

ವಲಸೆ ಕಾರ್ಮಿಕರ ಮೇಲೆ ಹರಿದ ರೈಲು: 16 ಮಂದಿ ದುರ್ಮರಣ, ಕಾರ್ಮಿಕ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ವಲಸೆ ಕಾರ್ಮಿಕರು ರೈಲು ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಆಯಾಸಗೊಂಡ ಅವರು ಹಳಿಗಳ ಮೇಲೆಯೇ ವಿಶ್ರಾಂತಿ ಪಡೆದಿದ್ದಾರೆ. ಅದೇ ಹಳಿಯಲ್ಲಿ ಬೆಳಗ್ಗೆ ಸುಮಾರು 5.15ಕ್ಕೆ ಗೂಡ್ಸ್‌ ರೈಲು ಬಂದಿದೆ. ಪರಿಣಾಮ, ಸುಸ್ತಾಗಿ ಬಳಲಿ ಮಲಗಿದ್ದ 16 ಮಂದಿ ಕಾರ್ಮಿಕರು ಸಿಹಿನಿದ್ರೆಯಿಂದ ಚಿರನಿದ್ರೆಗೆ ಜಾರಿದರು.

Maharashtra: 14 migrant workers mowed down by goods train in Aurangabad
ಹಳಿಮೇಲೆ ಮಲಗಿದ್ದವರ ಮೇಲೆ ಹರಿದ ಗೂಡ್ಸ್​​ ರೈಲು: 14 ಮಂದಿ ಸಾವು, ಇಬ್ಬರಿಗೆ ಗಾಯ
author img

By

Published : May 8, 2020, 8:50 AM IST

Updated : May 8, 2020, 12:17 PM IST

ಮಹಾರಾಷ್ಟ್ರ: ರೈಲ್ವೆ ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್​ ರೈಲು ಹರಿದಿದೆ. ಪರಿಣಾಮ 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿ ಬೆಳಗ್ಗಿನ ಜಾವ ಸಂಭವಿಸಿದೆ.

ಘಟನೆಯಲ್ಲಿ ಸಾವಿಗೀಡಾದ ವಲಸೆ ಕಾರ್ಮಿಕರು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಬೇಕಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಳಿಮೇಲೆ ಮಲಗಿದ್ದವರ ಮೇಲೆ ಹರಿದ ಗೂಡ್ಸ್​​ ರೈಲು: 14 ಮಂದಿ ಸಾವು, ಇಬ್ಬರಿಗೆ ಗಾಯ

ಬೆಳಗ್ಗೆ 5.15ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಎಲ್ಲರೂ ರೈಲ್ವೆ ಹಳಿ ಹಿಡಿದುಕೊಂಡು ತವರು ಸೇರಿಕೊಳ್ಳುವ ಆತುರದಲ್ಲಿದ್ದರು. ಈ ವೇಳೆ ರಾತ್ರಿ ರೈಲ್ವೆ ಹಳಿ ಮೇಲೆ ಕೊಂಚ ವಿಶ್ರಾಂತಿಗಾಗಿ ಮಲಗಿದ್ದಾರೆ. ಹೀಗೆ ಮಲಗಿದ್ದವರು ಸಿಹಿನಿದ್ರೆಗೆ ಜಾರಿದರು. ನಡೆದು ಸುಸ್ತಾಗಿ ಮಲಗಿದ್ದ ಅವರಿಗೆ ಹಳಿಯಲ್ಲಿ ರೈಲು ಬಂದಿದ್ದೇ ಗೊತ್ತಾಗಲಿಲ್ಲ. 21 ಕಾರ್ಮಿಕರ ಪೈಕಿ 16 ಮಂದಿಯ ಮೈಮೇಲೆ ರೈಲು ಹರಿದು ದೇಹಗಳು ಛಿದ್ರ ಛಿದ್ರವಾಗಿದೆ. ಈ ವೇಳೆ ಇಬ್ಬರು ಹಳಿಯಿಂದ ದೂರದಲ್ಲಿದ್ದು ಬದುಕುಳಿದಿದ್ದಾರೆ. ಘಟನೆ ಮಡಿದ ಜೀವಗಳನ್ನು ಕಂಡ ಇಬ್ಬರು ಕಾರ್ಮಿಕರು ತಮ್ಮವರನ್ನು ಕಳೆದುಕೊಂಡು ಮಾನಸಿಕವಾಗಿ ತೀವ್ರ ರೀತಿಯಲ್ಲಿ ಜರ್ಜರಿತರಾಗಿದ್ದಾರೆ. ಹೀಗಾಗಿ ಇಬ್ಬರಿಗೂ ವಿಶೇಷವಾಗಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ.

ಮಧ್ಯಪ್ರದೇಶದ ಉಮರಿಯಾ ಮತ್ತು ಸಡೋಲ್‌ ಗ್ರಾಮದ ನಿವಾಸಿಗಳಾದ ಈ ಕಾರ್ಮಿಕರು ಔರಂಗಾಬಾದ್‌ನ ಭೂಸವಾಲ್‌ ರೈಲು ನಿಲ್ದಾಣಕ್ಕೆ ನಡೆದುಕೊಂಡೇ ತೆರಳುತ್ತಿದ್ದರಂತೆ.

  • During early hours today after seeing some labourers on track, loco pilot of goods train tried to stop the train but eventually hit them between Badnapur and Karmad stations in Parbhani-Manmad section
    Injureds have been taken to Aurangabad Civil Hospital.
    Inquiry has been ordered

    — Ministry of Railways (@RailMinIndia) May 8, 2020 " class="align-text-top noRightClick twitterSection" data=" ">

ಘಟನೆಯಲ್ಲಿ ಗಾಯಗೊಂಡವರನ್ನ ಔರಂಗಾಬಾದ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರದಿಂದ ಪರಿಹಾರ ಘೋಷಣೆ:

ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ.

Last Updated : May 8, 2020, 12:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.