ಮುಂಬೈ: ಬಾಲಾಕೋಟ್ ಏರ್‌ಸ್ಟ್ರೈಕ್ ಬಗ್ಗೆ ಪಾಕ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವಾಗಲೂ ಸಾಕ್ಷ್ಯ ಕೇಳ್ತಾರೆ. ಪಾಕ್ ಮೇಲೆ ಪ್ರಯೋಗಿಸುವ ಬಾಂಬ್‌ಗೆ ನಿಮ್ಮ ನಾಯಕರನ್ನ ಕಟ್ಟಿ ಎಸೆಯಬೇಕು. ಆಗ ಭಾರತೀಯ ಸೈನಿಕರ ಸಾಧನೆಯನ್ನ ಕಣ್ಣಾರೆ ಕಾಣುತ್ತಾರೆ ಅಂತಾ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಟಾಂಗ್ ನೀಡಿದ್ದಾರೆ.
ಪಲ್ಗರ್ ಜಿಲ್ಲೆಯ ವಿರಾರ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಬರೀ ಕೇಂದ್ರ ಸರ್ಕಾರ ಮೇಲಷ್ಟೇ ಅನುಮಾನ ವ್ಯಕ್ತಪಡಿಸ್ತಿಲ್ಲ. ಆ ಮೂಲಕ ಸೈನ್ಯದ ಆತ್ಮಸ್ಥೈರ್ಯವನ್ನ ಉಡುಗಿಸುವ ಪ್ರಯತ್ನ ನಡೆಸಿವೆ ಅಂತಾ ವಾಗ್ದಾಳಿ ನಡೆಸಿದರು.
ವಾಯು ದಾಳಿಯ ಬಗ್ಗೆ ಸಂಶಯವಿದ್ರೇ, ರಾಕೆಟ್‌ಗಳಿಗೆ ನಿಮ್ಮ ನಾಯಕರನ್ನ ಕಟ್ಟಿ, ಅದನ್ನ ಬಾಲಾಕೋಟನಲ್ಲಿ ಎಸೆಯಬೇಕು. ಆಗ ಭಾರತೀಯ ಸೈನಿಕರ ಸಾಹಸ ಕಣ್ಣಾರೆ ನೋಡೋದಕ್ಕೆ ಸಾಧ್ಯವಾಗುತ್ತೆ ಅಂತಾ ಹೇಳಿದರು.
ಇತ್ತೀಚೆಗಷ್ಟೇ ಪಂಕಜಾ ಮುಂಡೆ ಇಂತಹುದೇ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಎಸೆಯಬೇಕು ಎನ್ನುವ ಮೂಲಕ ಪಂಕಜಾ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.