ಅಮರಾವತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ಸಂತ ಗಾಡಗೆ ಬಾಬಾ ವಿಶ್ವವಿದ್ಯಾಲಯವು ಈ ವರ್ಷದ ಕಲ್ಪನಾ ಚಾವ್ಲಾ ಯಂಗ್ ಲೇಡಿ ಸಂಶೋಧಕಿ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಸಂತ ಗಾಡಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯದ ಅಡಿಯಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳಾ ಸಂಶೋಧನಾ ಅಭ್ಯರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿಶ್ವವಿದ್ಯಾಲಯದ ಸುತ್ತೋಲೆಯ ಪ್ರಕಾರ, ಅರ್ಹತಾ ಮಾನದಂಡಗಳು ಇಂತಿವೆ.
ನವೆಂಬರ್ 30, 2020 ರಂತೆ ಅರ್ಜಿದಾರರ ವಯಸ್ಸು 35 ವರ್ಷಕ್ಕಿಂತ ಕಡಿಮೆ ಇರಬೇಕು.
ಅಭ್ಯರ್ಥಿಯು ಅತ್ಯುತ್ತಮ ಸಂಶೋಧನಾ ಕಾರ್ಯಗಳನ್ನು ಮಾಡಿರಬೇಕು ಮತ್ತು ಈ ಕೆಲಸವನ್ನು ಸಂಬಂಧಪಟ್ಟ ವಿಭಾಗದ ತಜ್ಞರು ಗುರುತಿಸಿರಬೇಕು.
ಅಭ್ಯರ್ಥಿಯು ವಿದರ್ಭ ಪ್ರದೇಶದ ವಿಶ್ವವಿದ್ಯಾಲಯಗಳಿಂದ ಪಿಎಚ್‌ಡಿ ಪದವಿ ಹೊಂದಿರಬೇಕು.
ಅಭ್ಯರ್ಥಿಯು ಸಂಶೋಧನೆಯ ಬಗ್ಗೆ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿರಬೇಕು. ಅವರ ಪ್ರಕಟಿತ ಕೃತಿಗಳು ಸಂಬಂಧಪಟ್ಟ ವಿಭಾಗದಲ್ಲಿ ಸಂಶೋಧನೆಯೆಂದು ದೃಢಿಕರಿಸಿರಬೇಕು.
ಪಿಎಚ್‌ಡಿ ಪದವಿ ಪಡೆದ ನಂತರ, ಅಭ್ಯರ್ಥಿಯು ಖ್ಯಾತಿಯ ಜರ್ನಲ್‌ಗಳಲ್ಲಿ ಅಥವಾ ಏಕ-ಲೇಖಕ ಪತ್ರಿಕೆಗಳ ಮೂಲಕ ಸ್ವತಂತ್ರ ಸಂಶೋಧನಾ ಕಾರ್ಯವನ್ನು ಮುಂದುವರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿರಬೇಕು.
ಪ್ರಶಸ್ತಿಗೆ ಸಂಬಂಧಿಸಿದ ಮಾಹಿತಿಯೊಂದಿಗಿನ ನಿಗದಿತ ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ವಿಭಾಗವು 2020ರ ನವೆಂಬರ್ 30ರೊಳಗೆ, ರೂ. 100 ಶುಲ್ಕದೊಂದಿಗೆ ಪಡೆಯಬಹುದು. ಪೂರ್ಣಗೊಂಡ ಅರ್ಜಿಯೊಂದಿಗೆ, ಎಲ್ಲಾ ರೀತಿಯ ಹತ್ತು ಪ್ರತಿಗಳು 2020 ರ ನವೆಂಬರ್ 30 ರಂದು ಅಥವಾ ಅದಕ್ಕೂ ಮೊದಲು ಸಂತ ಗಾಡಗೆ ಬಾಬಾ ಅಮರಾವತಿ ವಿಶ್ವವಿದ್ಯಾಲಯವನ್ನು ತಲುಪಬೇಕು. ವಿಳಂಬವಾದ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.