ETV Bharat / bharat

ಹೋಟೆಲ್​ ಮೇಲೆ ಗುಂಡು ಹಾರಿಸಿ ಹಣ ದೋಚಿದ ಡಕಾಯಿತರು!

author img

By

Published : Oct 1, 2020, 12:19 PM IST

ಇಂದು ಬೆಳಗ್ಗೆ ಡಕಾಯಿತರು ಹೋಟೆಲ್​ ಮೇಲೆ ಗುಂಡು ಹಾರಿಸಿ ಲಕ್ಷಕ್ಕೂ ಅಧಿಕ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್​ ಜಿಲ್ಲೆಯಲ್ಲಿ ನಡೆದಿದೆ.

Dacoits open fire at hotel, Dacoits open fire at hotel in Palghar, Palghar firing, Palghar firing news, ಹೋಟೆಲ್​ ಮೇಲೆ ಗುಂಡು ಹಾರಿಸಿ ಹಣ ದೋಚಿದ ಡಕಾಯಿತರು, ಪಾಲ್ಘರ್​ನಲ್ಲಿ ಹೋಟೆಲ್​ ಮೇಲೆ ಗುಂಡು ಹಾರಿಸಿ ಹಣ ದೋಚಿದ ಡಕಾಯಿತರು, ಪಾಲ್ಘರ್​ನಲ್ಲಿ ಗುಂಡಿನ ದಾಳಿ, ಪಾಲ್ಘರ್​ನಲ್ಲಿ ಡಕಾಯಿತರಿಂದ ಗುಂಡಿನ ದಾಳಿ,  ಪಾಲ್ಘರ್ ಗುಂಡಿನ ದಾಳಿ ಸುದ್ದಿ,
ಹೋಟೆಲ್​ ಮೇಲೆ ಗುಂಡು ಹಾರಿಸಿ ಹಣ ದೋಚಿದ ಡಕಾಯಿತರು

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ಹೋಟೆಲ್‌ನಲ್ಲಿ ಗುರುವಾರ ಬೆಳಗ್ಗೆ ಮೂವರು ಡಕಾಯಿತರು ಗುಂಡು ಹಾರಿಸಿ 1.10 ಲಕ್ಷ ರೂಪಾಯಿ ನಗದನ್ನು ಲೂಟಿ ಮಾಡಿರುವ ಘಟನೆ ನಡೆದಿದೆ.

ಬೆಳಗ್ಗೆ 3.30 ರ ಸುಮಾರಿಗೆ ಅಂಬೋಲಿ ಬಳಿಯ ದುಂಡಲ್ವಾಡಿ ಗ್ರಾಮದ ಆಕಾಶ್ ಹೋಟೆಲ್‌ಗೆ ಮೂವರು ಡಕಾಯಿತರು ಕಾರಿನಲ್ಲಿ ಬಂದಿದ್ದಾರೆ. ನಂತರ ಗುಂಡು ಹಾರಿಸಲು ಪ್ರಾರಂಭಿಸಿ ಅಲ್ಲಿಂದ ಹಣವನ್ನು ಲೂಟಿ ಮಾಡಿ ತಮ್ಮ ಕಾರಿನ ಮೂಲಕ ಪರಾರಿಯಾಗಿದ್ದಾರೆ. ಈ ಬಗ್ಗೆ ಕಾಸಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದತ್ತಾತ್ರೇಯ ಟಿ. ಶಿಂಧೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು.

ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪೊಲೀಸರು ನಾಕಾಬಂದಿಗಳನ್ನು ಹಾಕಿದ್ದಾರೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.