ETV Bharat / state

ಮೈಸೂರು ಪೇಟಕ್ಕಿದೆ ರಾಜ ಪರಂಪರೆಯ ಇತಿಹಾಸ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ - Mysuru peta - MYSURU PETA

ಮೈಸೂರು ರಾಜಪರಂಪರೆಯಲ್ಲಿ ಪೇಟಗಳಿಗೆ ತನ್ನದೇ ಆದ ಮಹತ್ವವಿದೆ. ಈ ಪೇಟಗಳ ವಿಶೇಷತೆ ಬಗ್ಗೆ ಪೇಟ ತಯಾರಕ ನಂದನ್ ಸಿಂಗ್ ಎಂಬುವವರು ಮಾತನಾಡಿದ್ದಾರೆ.

ಮೈಸೂರು ಪೇಟ
ಮೈಸೂರು ಪೇಟ (ETV Bharat)
author img

By ETV Bharat Karnataka Team

Published : Sep 30, 2024, 5:55 PM IST

Updated : Sep 30, 2024, 9:14 PM IST

ಮೈಸೂರು : ಅರಮನೆಗಳ ನಗರಿ ಮೈಸೂರು ತನ್ನದೇ ಆದ ರಾಜ ಪರಂಪರೆಯ ಇತಿಹಾಸ ಹೊಂದಿದೆ. ದಸರಾ ಸಂದರ್ಭದಲ್ಲಿ ರಾಜ ಪರಂಪರೆಯ ವೈಭವ ಅರಮನೆಯೊಳಗಡೆ ಮತ್ತೊಮ್ಮೆ ಮೂಡಿ ಬರುತ್ತದೆ. ಇದಕ್ಕೆ ಕಾರಣ ಇಂದಿಗೂ ರಾಜ ಪಾರಂಪರೆಯ ರೀತಿ ರಾಜವಂಶಸ್ಥರು ನಡೆಸುವ ಶರನ್ನವರಾತ್ರಿ ಪೂಜೆ. ಇಂತಹ ಪೂಜೆ ಸಂದರ್ಭದಲ್ಲಿ ರಾಜ ವಂಶಸ್ಥರು ಹಾಗೂ ಇತರ ರಾಜ ಮನೆತನದವರು ಧರಿಸುವ ಪೇಟ ತನ್ನದೇ ಆದ ಇತಿಹಾಸ ಹೊಂದಿದೆ. ಈ ಹಿನ್ನೆಲೆ ಮೈಸೂರು ಪೇಟದ ವಿಶೇಷತೆಗಳೇನು? ಯಾವ ರೀತಿ ತಯಾರಾಗುತ್ತದೆ? ಸಾಮಾನ್ಯ ಪೇಟಕ್ಕೂ, ಮೈಸೂರು ಪೇಟಕ್ಕೂ ಇರುವ ವ್ಯತ್ಯಾಸಗಳೇನು? ಮೈಸೂರು ಪೇಟ ವಿಶೇಷ ಹೇಗೆ? ಈ ಎಲ್ಲಾ ಕುರಿತು ಮೈಸೂರು ಜರಿ ಪೇಟದ ಸ್ಪೆಷಲ್‌ ಸ್ಟೋರಿ ಇಲ್ಲಿದೆ.

ಮೈಸೂರಿನ ಪೇಟದ ಹಿನ್ನೆಲೆ ಮತ್ತು ವಿಶೇಷತೆ : ಈ ಬಗ್ಗೆ ಪೇಟ ತಯಾರಕಾದ ನಂದನ್ ಸಿಂಗ್ ಅವರು ಮಾತನಾಡಿ, ಮೈಸೂರಿನ ಪೇಟಕ್ಕೆ ಎಲ್ಲೆಡೆ ಭಾರಿ ಬೇಡಿಕೆ ಇದೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಭಿನ್ನವಾದ ಪೇಟಗಳನ್ನು ಧರಿಸುತ್ತಿದ್ದರು. ಆಗಿನ ರಾಜ ಪರಂಪರೆಯಲ್ಲಿ ಪೇಟಗಳಿಗೆ ವಿಶೇಷ ಸ್ಥಾನ ಇತ್ತು. ಅದರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಪೇಟವನ್ನು ಬಹಳ ಇಷ್ಟಪಡುತ್ತಿದ್ದರು. ‌‌ಅಂದಿನಿಂದಲೂ ಮೈಸೂರಿನ ಪೇಟಕ್ಕೆ ತನ್ನ‌ದೇ ಆದ ಇತಿಹಾಸವಿದೆ. ಸಾಮಾನ್ಯ ಪೇಟ ತಯಾರಿಸುವುದು ಸುಲಭ. ಆದರೆ, ಮೈಸೂರು ಪೇಟ ತಯಾರಿಕಾ ಕ್ರಮ ಬಹಳ ಕಷ್ಟ. ಆದರೂ ಕೂಡಾ ಇದು ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಹೆಚ್ಚಿಗೆ ಆಕರ್ಷಣೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.

ಮೈಸೂರು ಪೇಟ ತಯಾರಕ ನಂದನ್ ಸಿಂಗ್ ಮಾತನಾಡಿದರು (ETV Bharat)

ಸಾಮಾನ್ಯ ಪೇಟಕ್ಕೂ, ಮೈಸೂರಿನ ಪೇಟಕ್ಕೂ ವ್ಯತ್ಯಾಸ ಇದೆ : ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಅತಿಥಿ ಗಣ್ಯರಿಗೆ ತೊಡಿಸುವ ಪೇಟ ಸಾಮಾನ್ಯ ಪೇಟವಾಗಿದೆ‌. ಇದನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು. ಆದರೆ, ಮೈಸೂರಿನ ಪೇಟಕ್ಕೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಸಿಲ್ಕ್, ಮೈಸೂರು ಬನಾರಸ್ ಸೀರೆಯಿಂದ ಪೇಟ ತಯಾರಿಸಲಾಗುತ್ತದೆ. ಈ ಪೇಟದಲ್ಲಿ‌ ನಾವು ಕಾಣುವ ಬಾರ್ಡರ್​ಗಳು ಮತ್ತು ಸಣ್ಣ ಸಣ್ಣ ಮಣಿಗಳಿಗೂ ಕೂಡ ಹೆಚ್ಚಿನ ಕೆಲಸವನ್ನು ಮಾಡಬೇಕಾಗುತ್ತದೆ. ಹೀಗಾಗಿ ಮೈಸೂರಿನ ಪೇಟಕ್ಕೂ, ಸಾಮಾನ್ಯ ಪೇಟಕ್ಕೂ ಬಹಳ ವ್ಯತ್ಯಾಸವಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಪೇಟಾ ತಯಾರಿಕೆಯಲ್ಲಿ ನಂದನ್ ಸಿಂಗ್
ಮೈಸೂರು ಪೇಟಾ ತಯಾರಿಕೆಯಲ್ಲಿ ನಂದನ್ ಸಿಂಗ್ (ETV Bharat)

ಮೈಸೂರು ಪೇಟದ ತಯಾರಿಕೆ ಹೇಗೆ ಗೊತ್ತಾ? : ವಿಶೇಷವಾಗಿ ಮೈಸೂರು ಪೇಟವನ್ನು ತಯಾರಿಸಲು ಹೆಚ್ಚಿನ ಗುಣಮಟ್ಟದ ಮೈಸೂರು ಸಿಲ್ಕ್ ಸೀರೆಗಳ ಬಾರ್ಡರ್​ಗಳಿಂದ ಪೇಟವನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ತಲೆಗೆ ಸುತ್ತುವ ಪೇಟದಂತೆ ಒಳ ಸುರುಳಿಗಳನ್ನು ಸುತ್ತಿಕೊಂಡು, ಹೆಚ್ಚಿನ ಆಕರ್ಷಣೆ ನೀಡುವ ಕೆಂಪು ಬಣ್ಣದ ಸೀರೆಯಲ್ಲಿ ಮಾಡಲಾಗುತ್ತದೆ ಎಂದರು.

ಪ್ರತಿಯೊಂದು ಪೇಟಕ್ಕೂ ತನ್ನದೇ ಆದ ಮಾದರಿ‌ ಇರುತ್ತದೆ. ಮೈಸೂರಿನ ಪೇಟ ತಯಾರಿಸುವಾಗ ಪ್ರಮುಖವಾಗಿ ಗಂಡಭೇರುಂಡ ಲಾಂಛನದ ಡಾಲರ್ ಸೇರಿ, ಮುತ್ತು ಮತ್ತು ಮಣಿಗಳನ್ನು ಹಾಕಿ‌ ಮಾಡಲಾಗುತ್ತದೆ. ಅದರಲ್ಲೂ ನಾವು ಅರಮನೆಯಲ್ಲಿ ಇರುವ ಪೇಂಟಿಂಗ್​ಗಳ ಸಹಾಯದಿಂದ ಮತ್ತು ಮೈಸೂರಿನಲ್ಲಿ ರಾಜರ ಪ್ರತಿಮೆಗಳ ಸಹಾಯದಿಂದ ಪೇಟಗಳ ಆಕೃತಿ ಮತ್ತು ಅಳತೆ‌ ಮಾಹಿತಿಯನ್ನು ಅಂದಾಜಿಸಿ ತಯಾರಿಸಲಾಗುತ್ತದೆ ಎಂದು ಹೇಳಿದರು.

ಮೈಸೂರಿನ ಪೇಟದಲ್ಲಿ ವಿವಿಧ ವಿಧಗಳು : ಮೈಸೂರಿನ ಪೇಟದಲ್ಲಿ ಸಾಕಷ್ಟು ವಿಧಗಳು ಇವೆ. ಹತ್ತನೆ ಚಾಮರಾಜೇಂದ್ರ ಒಡೆಯರ್​ರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರವರೆಗೂ ಸಾಕಷ್ಟು ವಿಧಗಳಲ್ಲಿ ಮೈಸೂರು ಪೇಟವನ್ನು ಧರಿಸಿದ್ದರು. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಾ ರೀತಿಯ ಪೇಟಗಳನ್ನು ಧರಿಸುತ್ತಿದ್ದರು. ರಾಜರ ಪೇಟ, ದಿವಾನರ ಪೇಟ ಹೀಗೆ ಹೆಚ್ಚಿನ ರೀತಿಯಲ್ಲಿ ವಿಭಿನ್ನ ಶೈಲಿಯಲ್ಲಿ ಪೇಟಗಳು ಇದ್ದವು. ಆಗಿನ ಕಾಲದ ರಾಜರು ತಮ್ಮ ಮದುವೆ ಸಮಾರಂಭಕ್ಕೆ ಮತ್ತು ಕಾರ್ಯಕ್ರಮಗಳಿಗೆ, ಖಾಸಗಿ ದರ್ಬಾರ್ ಸಮಯದಲ್ಲಿ ವಿವಿಧ ಆಕೃತಿಯ ಪೇಟಗಳನ್ನು ಧರಿಸುತ್ತಿದ್ದರು ಎಂದರು.

MYSURU
ಮೈಸೂರು ಪೇಟಾ (ETV Bharat)

ವಂಶಪರಂಪರೆಯಾಗಿ ಬಂದ ಕಲೆ : ನನ್ನ ತಾತ ಮತ್ತು ತಂದೆಯೂ ಇದೇ ಕೆಲಸ ಮಾಡುತ್ತಿದ್ದರು. ನಾಟಕಗಳಿಗೆ ಉಡುಪುಗಳನ್ನು ತಯಾರಿಸುವುದು ಹಾಗೂ ಪೇಟಗಳಲ್ಲಿ ವಿಶೇಷವಾಗಿ ನನ್ನ ತಂದೆ ಪರಿಣತಿ ಹೊಂದಿದ್ದರು. ಚಿಕ್ಕವಯಸ್ಸಿನಿಂದಲೂ ಅದನ್ನು ನೋಡುತ್ತಾ ಬೆಳೆದ ನನಗೆ ಈ ಕಲೆ ಸುಲಭವಾಯಿತು. ಪೇಂಟಿಂಗ್​ನಲ್ಲಿ ನನಗೆ ಹೆಚ್ಚಿನ ಆಸಕ್ತಿ. ಮನಸ್ಸಿಗೆ ಬೇಜಾರಾದಾಗ ಮೈಸೂರಿನ ಅರಮನೆಗೆ ಹೋಗುತ್ತಿದ್ದೆ. ಅಲ್ಲಿನ ಕಲಾಕೃತಿಗಳನ್ನು ನೋಡಿ ನಾನು ಏನಾದರೂ ಮಾಡಬೇಕು ಅನ್ನಿಸುತ್ತಿತ್ತು. ಇದರಿಂದ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಮೈಸೂರು ಪೇಟ ತಯಾರು ಮಾಡಿದ್ದೆ: ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದ್ದಾಗ, ಕಾರ್ಯಕ್ರಮದಲ್ಲಿ ಸನ್ಮಾನಿಸುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪೇಟದ ಮಾದರಿಯಲ್ಲೇ ತಯಾರು ಮಾಡಿಕೊಟ್ಟಿದ್ದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಉದ್ಘಾಟನೆ ಸಮಯದಲ್ಲಿ ಕೆಂಪೇಗೌಡರ ಪೇಟದ ಮಾದರಿಯಲ್ಲಿ ಸಿದ್ದಪಡಿಸಿ ನೀಡಲಾಗಿತ್ತು ಎಂದು ತಿಳಿಸಿದರು.

ಮೈಸೂರಿನ ಪೇಟ ಹೆಸರು ಹೇಗೆ ಬಂತು ಗೊತ್ತಾ ?: ಮೈಸೂರು ಎಂದರೆ ಅರಮನೆ, ಅರಮನೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್. ಒಬ್ಬ ರಾಜನಿಗೆ ಕಿರೀಟ ತೊಟ್ಟಾಗ ಹೆಚ್ಚಿನ ಗೌರವ ಸಿಗುತ್ತದೆ. ಹೀಗಾಗಿ ಮೈಸೂರನ್ನು ಆಳಿದ ರಾಜ ಮನೆತನಗಳು ಹಾಗೂ ರಾಜರ ಕಾರಣದಿಂದ ಮೈಸೂರಿನ ಪೇಟವು ಹೆಚ್ಚು ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ ಎಂದರು.

ಪೇಟ ತಯಾರಿಸುವುದೇ ಒಂದು ಅದ್ಭುತ. ಈ ಕಲೆ ನಮಗೆ ತಿಳಿಯುತ್ತಿರುವುದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ, ನಾವೇ ಅದೃಷ್ಟವಂತರು ಎಂದು ಹೇಳಿದರು.

palace
ಅರಮನೆ (ETV Bharat)

ಮೈಸೂರು ಪೇಟ ಬಳಕೆಗೆ ಬಂದಿದ್ದು ಹೇಗೆ?: ಮೈಸೂರು ಪೇಟದಲ್ಲಿ ಹಲವಾರು ಬಗೆಯ ಪೇಟಗಳಿದ್ದು, ಸಾಮಾನ್ಯವಾಗಿ ಸನ್ಮಾನ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸಾರ್ವಜನಿಕವಾಗಿ ಉಪಯೋಗಿಸುವ ಸಾಮಾನ್ಯ ಪೇಟವನ್ನ ಮೈಸೂರು ಪೇಟ ಎಂದು ಸಹ ಕರೆಯುತ್ತೇವೆ. ಆದರೆ, ಈ ಪೇಟಗಳು ನೂರು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿವರೆಗೆ ಸಾರ್ವಜನಿಕವಾಗಿ ವಿಶೇಷ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ರಾಜ ಪರಂಪರೆಯಲ್ಲಿ ಬಳಸುವ ಪೇಟಗಳಿಗೆ ಸುಮಾರು 400ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.

ಆ ಸಂದರ್ಭದಲ್ಲಿ ರಾಜಪರಂಪರೆಯಲ್ಲಿ ರಾಜರು ಉಪಯೋಗಿಸುತ್ತಿದ್ದ ವಿಶಿಷ್ಟ ಪೇಟಗಳು, ರಾಜರ ಪೇಟಗಳಾಗಿದ್ದು, ಮಂತ್ರಿಗಳು, ಸೈನಿಕರು , ಅರಮನೆಯ ಇತರ ಎಲ್ಲಾ ವರ್ಗದ ಜನರಿಗೂ ಒಂದೊಂದು ವಿಧದ ಪೇಟವನ್ನು ನಿಗದಿ ಮಾಡಲಾಗಿತ್ತು.

ಆ ಪೇಟದ ಮೂಲಕ ಅವರ ವೃತ್ತಿ ಗುರುತಿಸುವಂತ ಸೂಚಕವಾಗಿಯೂ ಬಳಕೆಯಲ್ಲಿತ್ತು. ಅದರಲ್ಲಿ ಮೈಸೂರಿನ ಪೇಟಕ್ಕೆ ರಾಜ ಪರಂಪರೆಯ ಇತಿಹಾಸವಿದೆ. ಅಂದು ರಾಜರು ಮೈಸೂರು ಸಿಲ್ಕ್​ನ ಬಾರ್ಡರ್​ಗಳಿಂದ ಗುರ್ತಿಸಲ್ಪಡುವ ಪೇಟಗಳನ್ನ ಹಾಕುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ತಾಯಿ ರಾಜಮಾತೆ ವಾಣಿವಿಲಾಸ್‌ ಅವರು ಮೈಸೂರು ರಾಜರಿಗೆ ಮೈಸೂರು ಸಿಲ್ಕ್​​ನ ಜರಿ ಪೇಟಗಳನ್ನ ಹಾಕುವಂತೆ ಉತ್ತೇಜನ ನೀಡಿದ್ದರು.

mysuru-peta
ಮೈಸೂರು ಪೇಟ (ETV Bharat)

ಅಲ್ಲಿಂದ ಮೈಸೂರು ರಾಜರು ಹಾಕುತ್ತಿದ್ದ ಪೇಟಕ್ಕೆ ಮೈಸೂರು ಪೇಟ ಎಂಬ ಹೆಸರು ಬಂದಿದೆ. ಆ ನಂತರ ಜಯ ಚಾಮರಾಜೇಂದ್ರ ಒಡೆಯರ್‌, ಹತ್ತನೇ ರಾಜ ಒಡೆಯರ್‌, ಸೇರಿದಂತೆ ಮೈಸೂರು ಸಂಸ್ಥಾನದ ಎಲ್ಲ ರಾಜರು ವಿಭಿನ್ನ ಬಗೆಯ ಪೇಟ ಹಾಕುತ್ತಿದ್ದರು.

ಅದೇ ಪೇಟ ಮುಂದುವರೆದಿದ್ದು, ಇಂದಿಗೂ ಸಹ ಶರನ್ನವರಾತ್ರಿಯ ಸಂದರ್ಭ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳಲ್ಲಿ ಮೈಸೂರಿನ ರಾಜವಂಶಸ್ಥರು ಪೇಟ ಹಾಕಿಕೊಳ್ಳುವ ಸಂಪ್ರದಾಯವಿದೆ. ಈ ಪೇಟ ಅಂದಾಜು 8 ಸಾವಿರದಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳಲಿದೆ. ಬನಾರಸ್‌ ಜೇರಿ ಬಾರ್ಡರ್​, ಮೈಸೂರು ಸಿಲ್ಕ್‌ ಜೇರಿ ಬಾರ್ಡರ್‌, ಸೇರಿದಂತೆ ಹಲವು ವಿಭಿನ್ನ ಬಗೆಯ ಬಟ್ಟೆಗಳಿಂದ ರಾಜ ಪರಂಪರೆಯ ಪೇಟಗಳನ್ನ ರೆಡಿ ಮಾಡಲಾಗುತ್ತದೆ. ಮೈಸೂರಿನ ರಾಜ ಪರಂಪರೆಯ ಜತೆಗೆ ಗೌರವ ಸೂಚಕವಾಗಿ ಮೈಸೂರು ಪೇಟ ಬಳಕೆಗೆ ಬಂತು ಎನ್ನಬಹುದಾಗಿದೆ.

ಇದನ್ನೂ ಓದಿ : ಮೈಸೂರು: ದಸರಾಗೆ ರಾಜಮಾತೆಯನ್ನು ಆಹ್ವಾನಿಸಿದ ಜಿಲ್ಲಾಡಳಿತ - Dasara invitation to Rajamata

Last Updated : Sep 30, 2024, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.