ETV Bharat / bharat

ನಟಿ ಕಂಗನಾ ರಣಾವತ್​ಗೆ ಯಾರು ಡ್ರಗ್ಸ್ ಪೂರೈಸುತ್ತಿದ್ದರು? - ಡ್ರಗ್ಸ್​ ದಂಧೆಯಲ್ಲಿ ಕಂಗನಾ

ಕಂಗನಾ ಬಗ್ಗೆ ತಿಳಿದುಕೊಂಡ ಅವರ ಹತ್ತಿರದವರೇ ಹ್ಯಾಶ್, ಕೊಕೇನ್ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಈ ಆಧಾರವನ್ನು ಇಟ್ಟುಕೊಂಡು ಅಧಿಕಾರಿಗಳು ಸುಮೋಟೊ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು..

Maha Congress demands probe into Kangana Ranaut's drug links
ಬಾಲಿವುಡ್​ ನಟಿ ಕಂಗನಾ ರಣಾವತ್
author img

By

Published : Sep 7, 2020, 5:37 PM IST

ಮುಂಬೈ : ಮಾದಕ ವಸ್ತು ದಂಧೆಯ ವ್ಯೂಹದಲ್ಲಿ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಹೆಸರು ಸಹ ಇದೀಗ ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ಮೇಲೆ ಆರೋಪ ಮಾಡಿರುವ ಮಹಾರಾಷ್ಟ್ರ ಕಾಂಗ್ರೆಸ್​, ಡ್ರಗ್ಸ್​ ದಂಧೆಯಲ್ಲಿ ಕಂಗನಾ ಯಾರೋ ಸಂಪರ್ಕಕಕ್ಕೆ ಬಂದಿದ್ದಾರೆ ಎಂದಿದೆ. ಬಾಲಿವುಡ್​ ಅಂಗಳದಲ್ಲಿ ಇದೀಗ ಮಾದಕ ವಸ್ತು ಸರಬರಾಜು ದಂಧೆ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಕಾಂಗ್ರೆಸ್​ನ ಈ ಆರೋಪದಿಂದ ತನಿಖೆ ಹೊಸ ಆಯಾಮ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.

ನಟಿ ಕಂಗನಾ ರಣಾವತ್ ತಾನೂ ಸಹ ಮಾದಕ ವ್ಯಸನಿ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕೆಲವು ವಿಡಿಯೋಗಳು ಇದೀಗ ಬಹಿರಂಗಗೊಂಡಿವೆ. ಆ ವಿಡಿಯೋದಲ್ಲಿ ಸ್ವತಃ ಅವರೇ ಮಾದಕ ವ್ಯಸನಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಿದ್ದಲ್ಲಿ ಆಕೆಗೆ ಯಾರೋ ಒಬ್ಬರು ಈ ಡ್ರಗ್ಸ್ ಸರಬರಾಜು ಮಾಡಿರಬಹುದು. ಆ ​ಡ್ರಗ್ಸ್ ಯಾರು ಪೂರೈಸುತ್ತಿದ್ದರು? ಎಂಬುದರ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ತನಿಖೆ ನಡೆಸಬೇಕೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಒತ್ತಾಯ ಮಾಡಿದ್ದಾರೆ.

ಕಂಗನಾ ಬಗ್ಗೆ ತಿಳಿದುಕೊಂಡ ಅವರ ಹತ್ತಿರದವರೇ ಹ್ಯಾಶ್, ಕೊಕೇನ್ ಇತ್ಯಾದಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಈ ಆಧಾರವನ್ನು ಇಟ್ಟುಕೊಂಡು ಅಧಿಕಾರಿಗಳು ಸುಮೋಟೊ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.