ETV Bharat / bharat

ವಿಧಾನಪರಿಷತ್​ಗೆ ಮಹಾರಾಷ್ಟ್ರ ಸಿಎಂ ಸ್ಪರ್ಧೆ: ಅವಿರೋಧ ಆಯ್ಕೆ ಬಹುತೇಕ ಖಚಿತ! - ಉದ್ಧವ್​ ಠಾಕ್ರೆ ಅವಿರೋಧ ಆಯ್ಕೆ

ಮಹಾರಾಷ್ಟ್ರದಲ್ಲಿ 9 ಸ್ಥಾನಗಳಿಗೆ ಮೇಲ್ಮನೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಕಾಂಗ್ರೆಸ್​​​ ಅಭ್ಯರ್ಥಿಯೊಬ್ಬರು ತಾವು ಸಲ್ಲಿಕೆ ಮಾಡಿದ್ದ ನಾಮಪತ್ರ ಹಿಂಪಡೆದುಕೊಳ್ಳಲಿರುವ ಕಾರಣ ಸಿಎಂ ಉದ್ಧವ್​ ಠಾಕ್ರೆ ವಿಧಾನ ಪರಿಷತ್​ ಸದಸ್ಯರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ

Maharashtra CM
Maharashtra CM
author img

By

Published : May 11, 2020, 10:35 AM IST

ಮುಂಬೈ: ಮೇ. 21ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಪರಿಷತ್​ ಚುನಾವಣೆಯಲ್ಲಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

9 ಸ್ಥಾನಗಳಿಗೆ ಮೇಲ್ಮನೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಕಾಂಗ್ರೆಸ್​​​ ಅಭ್ಯರ್ಥಿಯೊಬ್ಬರು ತಾವು ಸಲ್ಲಿಕೆ ಮಾಡಿದ್ದ ನಾಮಪತ್ರ ಹಿಂಪಡೆದುಕೊಳ್ಳಲಿರುವ ಕಾರಣ ಉದ್ಧವ್​ ಠಾಕ್ರೆ ಆಯ್ಕೆ ಬಹುತೇಕ ಖಚಿತವಾಗಿದೆ.

ಮೇಲ್ಮನೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಮೇ.9 ರಂದು ಏಕಾಏಕಿಯಾಗಿ 2 ನೇ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಎರಡನೇ ಅಭ್ಯರ್ಥಿ ನಾಮಪತ್ರ ಹಿಂಪಡೆದುಕೊಂಡಿದೆ. ಭಾರತೀಯ ಜನತಾ ಪಾರ್ಟಿ ನಾಲ್ವರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

ಕಳೆದ ನವೆಂಬರ್​ 28ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಠಾಕ್ರೆ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಾಗಲು ಅವರಿಗೆ 6 ತಿಂಗಳ ಕಾಲಾವಕಾಶವಿತ್ತು. ಅದರ ಗಡುವು ಮೇ 28ರಂದು ಕೊನೆಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.