ಮುಂಬೈ: ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಹಥ್ರಾಸ್ಗೆ ತೆರಳುವಾಗ ದೆಹಲಿ-ಯುಪಿ ಗಡಿಯಲ್ಲಿ ಅವರನ್ನು ತಡೆದ ಪೊಲೀಸರಲ್ಲಿ ಒಬ್ಬರು ಪ್ರಿಯಾಂಕಾ ಬಟ್ಟೆ ಹಿಡಿದುಕೊಂಡಿದ್ದು, ಇದರ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷೆ ಚಿತ್ರ ವಾಘ್ ಒತ್ತಾಯಿಸಿದ್ದಾರೆ.
ವಾಘ್ ಅವರ ನಿಲುವನ್ನು ಕಾಂಗ್ರೆಸ್ ನಾಯಕರು ಕೂಡ ಬೆಂಬಲಿಸಿದ್ದು, ಅವರು ಕಳೆದ ವರ್ಷ ಕೇಸರಿ ಪಾಳಯ ಸೇರಿದ್ದರೂ ತಮ್ಮ ಸಂಸ್ಕಾರವನ್ನು ಮರೆತಿಲ್ಲ ಎಂದು ಹೇಳಿದ್ದಾರೆ.
ಹಥ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರದ ಬಳಿಕ ಮೃತಪಟ್ಟ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಶನಿವಾರ ಮಧ್ಯಾಹ್ನ ದೆಹಲಿ-ಯುಪಿ ಗಡಿಗೆ ತಲುಪಿದ್ದರು.
ಈ ಸಂದರ್ಭ ಅವರನ್ನು ಪೊಲೀಸರು ತಡೆದಿದ್ದರು. ಹೆಲ್ಮೆಟ್ ಧರಿಸಿದ ಪೊಲೀಸರೊಬ್ಬರು ಪಬ್ಬರು ಡಿಎನ್ಡಿ ಟೋಲ್ ಪ್ಲಾಜಾದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕುರ್ತಾದಿಂದ ಹಿಡಿದಿದ್ದರು.
"ಮಹಿಳಾ ರಾಜಕೀಯ ನಾಯಕಿಯ ಬಟ್ಟೆಯ ಮೇಲೆ ಪೊಲೀಸ್ ಅಧಿಕಾರಿಗೆ ಕೈ ಹಾಕಲು ಎಷ್ಟು ಧೈರ್ಯ!" ಎಂದು ಈ ಕುರಿತು ವಾಘ್ ಟ್ವೀಟ್ ಮಾಡಿದ್ದಾರೆ.
-
पुरुष पुलिस की जुर्रत कैसे हुई कि वो एक महिला नेता के वस्त्रों पर हाथ डाल सके!समर्थन मे अगर महीलाए आगे आ रही है पुलीस कही की भी हो उन्हे अपनी मर्यादा का ध्यान रखना ही चाहीए
— Chitra Kishor Wagh (@ChitraKWagh) October 4, 2020 " class="align-text-top noRightClick twitterSection" data="
भारतीय संस्कृती मे विश्वास रखनेवाले मुख्यमंत्री @myogiadityanath जी ऐसे पुलीसवालोपर सख्त कारवाई करे @dgpup pic.twitter.com/RfbXiIIXcI
">पुरुष पुलिस की जुर्रत कैसे हुई कि वो एक महिला नेता के वस्त्रों पर हाथ डाल सके!समर्थन मे अगर महीलाए आगे आ रही है पुलीस कही की भी हो उन्हे अपनी मर्यादा का ध्यान रखना ही चाहीए
— Chitra Kishor Wagh (@ChitraKWagh) October 4, 2020
भारतीय संस्कृती मे विश्वास रखनेवाले मुख्यमंत्री @myogiadityanath जी ऐसे पुलीसवालोपर सख्त कारवाई करे @dgpup pic.twitter.com/RfbXiIIXcIपुरुष पुलिस की जुर्रत कैसे हुई कि वो एक महिला नेता के वस्त्रों पर हाथ डाल सके!समर्थन मे अगर महीलाए आगे आ रही है पुलीस कही की भी हो उन्हे अपनी मर्यादा का ध्यान रखना ही चाहीए
— Chitra Kishor Wagh (@ChitraKWagh) October 4, 2020
भारतीय संस्कृती मे विश्वास रखनेवाले मुख्यमंत्री @myogiadityanath जी ऐसे पुलीसवालोपर सख्त कारवाई करे @dgpup pic.twitter.com/RfbXiIIXcI
"ಭಾರತೀಯ ಸಂಸ್ಕೃತಿಯನ್ನು ನಂಬುವ ಯೋಗಿ ಆದಿತ್ಯನಾಥ್ ಜೀ, ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
ತಮ್ಮ ಟ್ವೀಟ್ ಜೊತೆಗೆ ಪ್ರಿಯಾಂಕಾ ಗಾಂಧಿಯನ್ನು ಅವರ ಕುರ್ತಾದಿಂದ ಹಿಡಿದಿರುವ ಅಧಿಕಾರಿಯ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ಯುವ ಕಾಂಗ್ರೆಸ್ ಮುಖ್ಯಸ್ಥ ಸತ್ಯಜಿತ್ ತಂಬೆ, ವಾಘ್ ಅವರ ನಿಲುವನ್ನು ಶ್ಲಾಘಿಸಿದರು. ಕಳೆದ ವರ್ಷ ಬಿಜೆಪಿಗೆ ಸೇರಲು ಎನ್‌ಸಿಪಿಯನ್ನು ತೊರೆದ ವಾಘ್, ತಮ್ಮ ಪಕ್ಷವನ್ನು ಬದಲಾಯಿಸಿದರೂ ತಮ್ಮ ಸಂಸ್ಕಾರ ಬಿಡಲಿಲ್ಲ ಎಂದು ಅವರು ಹೇಳಿದರು.
ಘಟನೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಟೀಕೆ ವ್ಯಕ್ತವಾಗಿದೆ.