ETV Bharat / bharat

ಸರ್ಕಾರ ಉರುಳಿಸುವುದು ಬಿಟ್ಟು, ಪೆಟ್ರೋಲ್​ ಬೆಲೆ ಕಡಿಮೆ ಮಾಡಿಸಿ; ನಮೋ ವಿರುದ್ಧ ರಾಗಾ ವಾಗ್ದಾಳಿ - ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು

ಮಧ್ಯಪ್ರದೇಶದಲ್ಲಿನ ರಾಜಕೀಯ ಬಿಕ್ಕಟ್ಟು ಉಂಟಾಗಲು ಕೇಂದ್ರ ಸರ್ಕಾರ ನೇರ ಹೊಣೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ರಾಹುಲ್​ ಗಾಂಧಿ ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Rahul Gandhi
ರಾಹುಲ್​ ಗಾಂಧಿ
author img

By

Published : Mar 11, 2020, 12:00 PM IST

ನವದೆಹಲಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಇದೀಗ ಫೈನಲ್​ ಹಂತಕ್ಕೆ ತಲುಪುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಚುನಾಯಿತ ಕಾಂಗ್ರೆಸ್​ ಸರ್ಕಾರ ಉರುಳಿಸುವುದರಲ್ಲಿ ನೀವೂ ತುಂಬಾ ಬ್ಯುಸಿ ಆಗಿದ್ದೀರಿ. ಆದರೆ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಶೇ.35ರಷ್ಟು ಕುಸಿದಿರುವುದು ನಿಮ್ಮ ಗಮನಕ್ಕೆ ಇಲ್ಲದೇ ಇರಬಹುದು. ಇದರ ಲಾಭ ದೇಶದ ಜನರಿಗೆ ಸಿಗುವಂತೆ ಮಾಡಿ. ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 60 ರೂಗಿಂತಲೂ ಕಡಿಮೆ ಮಾಡಿಸಿ ದೇಶದ ಆರ್ಥಿಕತೆ ಬಲಪಡಿಸಿ ಎಂದು ಟ್ವೀಟ್​ ಮಾಡಿದ್ದಾರೆ.

  • Hey @PMOIndia , while you were busy destabilising an elected Congress Govt, you may have missed noticing the 35% crash in global oil prices. Could you please pass on the benefit to Indians by slashing #petrol prices to under 60₹ per litre? Will help boost the stalled economy.

    — Rahul Gandhi (@RahulGandhi) March 11, 2020 " class="align-text-top noRightClick twitterSection" data=" ">

ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಭೇಟಿಯಾಗಿ ರಾಜೀನಾಮೆ ನೀಡುತ್ತಿದ್ದಂತೆ ಅವರ ಬೆನ್ನಲ್ಲೇ ಬರೋಬ್ಬರಿ 22 ಕಾಂಗ್ರೆಸ್​ ಶಾಸಕರು ಕಾಂಗ್ರೆಸ್​ ಪಕ್ಷ ತೊರೆದಿದ್ದಾರೆ. ಇಷ್ಟೊಂದು ಬೆಳವಣಿಗೆ ಆಗಲು ಕೇಂದ್ರ ಸರ್ಕಾರ ನೇರ ಹೊಣೆ ಎಂದು ಕಾಂಗ್ರೆಸ್​ ವಾಗ್ದಾಳಿ ನಡೆಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.