ವಿದಿಶಾ (ಮಧ್ಯಪ್ರದೇಶ): ಬಳಕೆದಾರರಿಂದ ಹಣ ಪಡೆಯುವ ಉದ್ದೇಶದಿಂದಾಗಿ ಪತ್ನಿ ಜೊತೆ ಏಕಾಂತದಲ್ಲಿದ್ದ ವಿಡಿಯೋವನ್ನು ಆ್ಯಪ್ ಮೂಲಕ ಲೈವ್ ಸ್ಟ್ರೀಮ್ ಮಾಡಿದ ಪತಿಯನ್ನು ವಿದಿಶಾ ಪೊಲೀಸರು ಬಂಧಿಸಿದ್ದಾರೆ.
ಚರಣಜೀತ್ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾ ಮೂಲಕ ಆಮಿಷವೊಡ್ಡಿ ವಿದಿಷಾಗೆ ಕರೆತಂದು ನನ್ನನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿ ಮಹಿಳೆ ಅ.21ರಂದು ದೂರು ನೀಡಿದ್ದಳು. ಅಲ್ಲದೆ ಈ ಹಿಂದೆ ಮದುವೆಯಾಗಿದ್ದ ವಿಷಯವನ್ನೂ ಆಕೆಯಿಂದ ಮರೆಮಾಚಿದ್ದನು. ಮದುವೆವಾಗಿ ಕೆಲ ದಿನ ಕಳೆದ ನಂತರ ಮಹಿಳೆಯ ಕೆಲವು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿ, ಲೈವ್ ವೀಡಿಯೋ ಮಾಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ಅಪ್ಲಿಕೇಶನ್‌ನ ಕಾರ್ಯ ವಿಧಾನವನ್ನು ವಿವರಿಸಿದ ಪೊಲೀಸ್ ಅಧಿಕಾರಿ, "ಗ್ರಾಹಕರು ಅಪ್ಲಿಕೇಶನ್‌ನಲ್ಲಿ ಪ್ರೊಫೈಲ್‌ಗಳನ್ನು 'ಲೈಕ್' ಮಾಡುತ್ತರೆ ಮತ್ತು ವಾಟ್ಸಾಪ್ ಮೂಲಕ ಅವರಿಗೆ ಕಳುಹಿಸಿದ ಬ್ಯಾಂಕ್ ಖಾತೆ ಸಂಖ್ಯೆಗೆ ಹಣ ಜಮಾ ಮಾಡುತ್ತಾರೆ. ಇದಕ್ಕೆ ಬದಲಾಗಿ ಅಶ್ಲೀಲ ವಿಡಿಯೋ ನೋಡಲು ಪ್ರವೇಶ ಪಡೆಯುತ್ತಾರೆ" ಎಂದು ಹೇಳಿದ್ದಾರೆ.
ಪೊಲೀಸ್ ತಂಡವು ಆರೋಪಿಯಿಂದ 15.5 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು 45,500 ರೂ. ನಗದು ಮತ್ತು ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದೆ. ಆರೋಪಿಯ ಮೂರು ಬ್ಯಾಂಕ್ ಖಾತೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಆರು ಲಕ್ಷ ರೂಪಾಯಿ ವಶಕ್ಕೆ ಹಣ ಇರುವುದಾಗಿ ಅಂದಾಜಿಸಲಾಗಿದೆ.
"ಐಪಿಸಿ ಮತ್ತು ಐಟಿ ಕಾಯ್ದೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ" ಎಂದು ಎಸ್ಪಿ ಹೇಳಿದ್ದಾರೆ. ಆರೋಪಿ ಮಹಿಳೆಯನ್ನು ಮದುವೆಯಾದಾಗಿನಿಂದಲೂ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.