ETV Bharat / bharat

ಟೀ ಮಾರುವವನ ಮಗಳು ಈಗ ಏರ್​ಫೋರ್ಸ್​ ಆಫೀಸರ್; 23ನೇ ವಯಸ್ಸಿಗೇ ಬಾನೆತ್ತರದ ಸಾಧನೆ!

ಭಾರತೀಯ ವಾಯುಪಡೆಗೆ ಮಧ್ಯ ಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಈಕೆ ಏರ್​ಫೋರ್ಸ್​ ಫ್ಲೈಯಿಂಗ್ ಆಫೀಸರ್ ಆಗಿ ನೇಮಕವಾಗಿದ್ದಾಳೆ. ಹೈದರಾಬಾದ್​ನ ದುಂಡಿಗಲ್ ಬಳಿಯ ಇಂಡಿಯನ್ ಏರ್​ಪೋರ್ಸ್​ ಅಕಾಡೆಮಿಯಲ್ಲಿ ನಡೆದ ಗ್ರಾಜುಯೇಶನ್ ಪರೇಡ್ ಸಮಾರಂಭದಲ್ಲಿ ಆಂಚಲ್​ಗೆ ರಾಷ್ಟ್ರಪತಿಗಳ ಪ್ರಶಂಸಾ ಪತ್ರವನ್ನು ನೀಡಲಾಯಿತು. ಒಟ್ಟು 123 ಫ್ಲೈಟ್ ಕೆಡೆಟ್​ಗಳನ್ನು ಈ ಸಮಾರಂಭದಲ್ಲಿ ಏರ್​ಫೋರ್ಸ್​ ಫ್ಲೈಯಿಂಗ್​ ಆಫೀಸರ್​ಗಳಾಗಿ ಸೇರ್ಪಡೆಗೊಳಿಸಲಾಯಿತು.

Aanchal Gangwal
Aanchal Gangwal
author img

By

Published : Jun 22, 2020, 11:25 PM IST

ನೀಮುಚ್ (ಮಧ್ಯ ಪ್ರದೇಶ): ಎಲ್ಲ ಅಡೆತಡೆಗಳನ್ನು ಮೀರಿ ಬಡ ಕುಟುಂಬದ ಯುವತಿಯೋರ್ವಳು ಏರ್​ಫೋರ್ಸ್​ ಅಧಿಕಾರಿಯಾಗಿ ಸಾಧನೆ ಮಾಡಿದ್ದು ಇಡೀ ದೇಶದ ಗಮನ ಸೆಳೆದಿದೆ. ಮಧ್ಯ ಪ್ರದೇಶದ ನೀಮುಚ್​ನ 23 ವರ್ಷದ ಯುವತಿ ಆಂಚಲ್ ಗಂಗ್ವಾಲ್ ಎಂಬ ಯುವತಿಯೇ ಈ ಬಾನೆತ್ತರದ ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾಳೆ. ಟೀ ಮಾರುವವನ ಮಗಳಾಗಿ, ಬಡಕುಟುಂಬದ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿಯೂ ಛಲ ಬಿಡದೇ ಗುರಿ ಸಾಧಿಸಿದ್ದಾಳೆ ಆಂಚಲ್.

ಭಾರತೀಯ ವಾಯುಪಡೆಗೆ ಮಧ್ಯ ಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾದ ಈಕೆ ಏರ್​ಫೋರ್ಸ್​ ಫ್ಲೈಯಿಂಗ್ ಆಫೀಸರ್ ಆಗಿ ನೇಮಕವಾಗಿದ್ದಾಳೆ. ಹೈದರಾಬಾದ್​ನ ದುಂಡಿಗಲ್ ಬಳಿಯ ಇಂಡಿಯನ್ ಏರ್​ಪೋರ್ಸ್​ ಅಕಾಡೆಮಿಯಲ್ಲಿ ನಡೆದ ಗ್ರಾಜುಯೇಶನ್ ಪರೇಡ್ ಸಮಾರಂಭದಲ್ಲಿ ಆಂಚಲ್​ಗೆ ರಾಷ್ಟ್ರಪತಿಗಳ ಪ್ರಶಂಸಾ ಪತ್ರವನ್ನು ನೀಡಲಾಯಿತು. ಒಟ್ಟು 123 ಫ್ಲೈಟ್ ಕೆಡೆಟ್​ಗಳನ್ನು ಈ ಸಮಾರಂಭದಲ್ಲಿ ಏರ್​ಫೋರ್ಸ್​ ಫ್ಲೈಯಿಂಗ್​ ಆಫೀಸರ್​ಗಳಾಗಿ ಸೇರ್ಪಡೆಗೊಳಿಸಲಾಯಿತು.

ಆಫೀಸರ್​ ಆಗಿರುವ ಯುವತಿ ಆಂಚಲ್​ ಅವರ ತಂದೆ ಸುರೇಶ ಗಂಗ್ವಾಲ್, ನೀಮುಚ್​ ಜಿಲ್ಲೆಯಲ್ಲಿ ಚಿಕ್ಕ ಟೀ ಅಂಗಡಿಯೊಂದನ್ನು ನಡೆಸುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ತನಗೆ ಬಡತನವಿದ್ದರೂ ಇಬ್ಬರು ಹೆಣ್ಣು ಹಾಗೂ ಓರ್ವ ಗಂಡು ಮಗನಿಗೆ ಯಾವುದೇ ಕೊರತೆಯಾಗದಂತೆ ಓದಿಸುತ್ತಿದ್ದಾರೆ.

ಸದ್ಯ ಆಫೀಸರ್ ಆಗಿರುವ ಮಗಳ ನಿರ್ಗಮನ ಪಥ ಸಂಚಲನ ನೋಡುವ ಭಾಗ್ಯ ಪಾಲಕರಿಗೆ ಸಿಗಲಿಲ್ಲ. ಲಾಕ್​ಡೌನ್​ ನಿರ್ಬಂಧಗಳು ಇನ್ನೂ ಜಾರಿಯಲ್ಲಿರುವುದರಿಂದ ಟಿವಿಯಲ್ಲೇ ಮಗಳ ಪದವಿ ಪ್ರದಾನ ಸಮಾರಂಭ ನೋಡಿದ ತಂದೆ ತಾಯಿ ಆನಂದ ಬಾಷ್ಪ ಸುರಿಸಿದರು.

ಫ್ಲೈಯಿಂಗ್ ಆಫೀಸರ್ ಆಂಚಲ್ ನೀಮುಚ್​ನ ಸೀತಾರಾಮ ಜಾಜು ಸರ್ಕಾರಿ ಹೆಣ್ಣುಮಕ್ಕಳ ಕಾಲೇಜಿನಿಂದ ಕಂಪ್ಯೂಟರ್​ ಸೈನ್ಸ್​ ಪದವಿ ಪಡೆದಿದ್ದಾರೆ. ಇದಕ್ಕೂ ಮುನ್ನ ಆಂಚಲ್, ಮಧ್ಯ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಲೇಬರ್ ಇನ್ಸಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಪದವಿ ಶಿಕ್ಷಣ ಪೂರೈಸಿದ ಕೂಡಲೇ ಆಂಚಲ್, AFCAT ಹಾಗೂ ಎಸ್​ಎಸ್​ಬಿ ಪರೀಕ್ಷೆಗಳನ್ನು ಬರೆಯಲಾರಂಭಿಸಿದರು. ಆರನೇ ಬಾರಿಯ ಪರೀಕ್ಷೆಯ ನಂತರ ಯಶಸ್ಸು ಪಡೆದುಕೊಂಡಿದ್ದಾರೆ. ಸದ್ಯ ಆಂಚಲ್ ಅವರ ಬಾನೆತ್ತರದ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.