ಲಖನೌ : ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ಇಲ್ಲಿನ ಈದ್ಗಾ ಮಸೀದಿ ಎರಡು ತಿಂಗಳ ಬಳಿಕ ಪ್ರಾರ್ಥನೆಗೆ ಮುಕ್ತವಾಗಿದೆ.
ಮಸೀದಿಗೆ ಪ್ರಾರ್ಥನೆಗೆ ಬರುವವರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರವೇಶ ದ್ವಾರದ ಬಳಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.
ಜೊತೆಗ ನಮಾಜ್ ನಿರ್ವಹಿಸುವಾಗಲು ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳಲಾಗುತ್ತಿದೆ.