ಲಕ್ನೊ: ಲಾಕ್‌ಡೌನ್ ಹಿನ್ನೆಲೆ, ಲಕ್ನೋದ ಕಾರ್ಡಿಯಾಲಜಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ, ಇದಕ್ಕೆ ಪ್ರಮುಖ ಕಾರಣವೆಂದರೆ ಸಾರಿಗೆ ಅನುಪಸ್ಥಿತಿ ಎನ್ನಲಾಗಿದೆ.
ಲಾಕ್‌ಡೌನ್ ಮೊದಲು ಆಸ್ಪತ್ರೆಗಳಿಗೆ ಬರುತ್ತಿದ್ದ ನೂರಾರು ಹೃದ್ರೋಗಿಗಳ ಬದಲಾಗಿ, ತೀರಾ ತುರ್ತು ಇರುವ ಒಂದು ಅಥವಾ ಎರಡು ರೋಗಿಗಳು ಪ್ರತಿನಿತ್ಯ ಆಸ್ಪತ್ರೆಗೆ ಬರುತ್ತಿದ್ದಾರೆ, ಅದರಲ್ಲೂ ಕೆಜಿಎಂಯುನ ಕಾರ್ಡಿಯಾಲಜಿ ಸೆಂಟರ್ಗೆ ಲಾಕ್ಡೌನ್ಗೆ ಮೊದಲು ಕನಿಷ್ಠ 650 ರೋಗಿಗಳಿಗೆ ಬರುತ್ತಿದ್ದರು ಆದರೆ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ವಿ. ಎಸ್. ನಾರಾಯಣ್ ಅವರು ಹೇಳುವ ಪ್ರಕಾರ, ಲಾಕ್‌ಡೌನ್ ನಂತರ ರೋಗಿಗಳ ಸಂಖ್ಯೆಯಲ್ಲಿ ಶೇಕಡಾ 60 ರಿಂದ 70 ರಷ್ಟು ಕುಸಿದಿದೆ ಎನ್ನುತ್ತಾರೆ.
ರೋಗಿಗಳು ಆಸ್ಪತ್ರೆಗೆ ಬಾರದಿರಲು ಪ್ರಮುಖ ಕಾರಣಗಳೆಂದರೆ.
ಲಾಕ್‌ಡೌನ್ ಸಮಯದಲ್ಲಿ ಕಾರ್ಡಿಯಾಲಜಿ ವಿಭಾಗ ತೆರೆದಿರುತ್ತದೆ ಎಂದು ಜನರಿಗೆ ತಿಳಿದಿಲ್ಲದಿರಬಹುದು. ಹೃದಯ ರೋಗಿಗಳು ಹೆಚ್ಚಾಗಿ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ ಹಾಗಾಗಿ ಜನರು ಮನೆಯಿಂದ ಹೊರಬಾರದೇ ಇರಬಹುದು. ಸಾರಿಗೆಯ ಅಲಭ್ಯತೆಯೂ ಕೂಡ ರೋಗಿಗಳಿಗೆ ಲಭ್ಯತೆಗೆ ಪ್ರಮುಖ ಕಾರಣ ಆಗಿರಬಹುದು ಎಂದು ನಾರಾಯಣ್ ಹೇಳಿದರು.
ಕಡಿಮೆ ಒತ್ತಡದ ಜೀವನ, ಜನಸಂಖೈ ಒತ್ತಡ ಇಲ್ಲದೇ ಇರುವುದು, ಜನರ ಆಹಾರ ಪದ್ಧತಿಯ ಸುಧಾರಣೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬಾರದೇ ಇರಬಹುದು ಎಂದು ಹೃದಯ ತಜ್ಞ ಮತ್ತು ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಆಸ್ಪತ್ರೆಯ ಸಲಹೆಗಾರ ಡಾ.ರಾಜೇಶ್ ಶ್ರೀವಾಸ್ತವ ತಿಳಿಸಿದರು.
ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೃದ್ರೋಗ ತಜ್ಞ ಡಾ.ಆದಿತ್ಯ ಕಪೂರ್ ಅವರ ಪ್ರಕಾರ, "ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೃದಯ ಸಂಬಂಧಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಎಸ್‌ಜಿಪಿಜಿಐ ವಿಷಯದಲ್ಲಿ, ತುರ್ತು ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 70 ರಷ್ಟು ಕುಸಿತ ಕಂಡಿದೆ. ಹೃದಯಾಘಾತ ಪ್ರಕರಣಗಳು ಸಹ ಕಡಿಮೆಯಾಗಿದೆ ಎಂದು ತಿಳಿಸಿದರು.
ಅಮೆರಿಕನ್ ಜರ್ನಲ್ ಪ್ರಕಾರ, ಕೊರೊನಾ ಸೋಂಕು ಆರಂಭದ ತಿಂಗಳಲ್ಲಿ ಹೃದಯ ಸಂಬಂಧಿತ ರೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಸ್ಪೇನ್‌ನಲ್ಲಿ ಶೇಕಡಾ 70 ರಷ್ಟು ಕುಸಿತ ಕಂಡುಬಂದಿದೆ" ಎಂದರು .