ಲಖನೌ: ಫ್ರಾನ್ಸ್‌ನಲ್ಲಿ ನಡೆದ ದಾಳಿಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಕವಿ ಮುನಾವರ್ ರಾಣಾ ಅವರ ವಿರುದ್ಧ ಇಲ್ಲಿನ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕವಿ ಮುನಾವರ್ ರಾಣಾ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ದೀಪಕ್ ಪಾಂಡೆ ಹೇಳಿಕೆ ಮೇರೆಗೆ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫ್ರಾನ್ಸ್ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್ ಅವರ ಕಾರ್ಟೂನ್‌ಗಳನ್ನು ತೋರಿಸುವ ಮೂಲಕ ಅವರನ್ನು ಅವಹೇಳನೆ ಮಾಡಿದ್ದಾರೆ ಎಂದು ಆರೋಪಿಸಿ, ಶಾಲಾ ಶಿಕ್ಷಕರೊಬ್ಬರ ಹತ್ಯೆ ನಡೆದಿತ್ತು.