ETV Bharat / bharat

270 ಕಿ.ಮೀ. ಸೈಕಲ್ ತುಳಿದು ಹೊಸ ಹುದ್ದೆ ಅಲಂಕರಿಸಿದ ಸೇನಾ ಲೆಫ್ಟಿನೆಂಟ್

ಫಿಟ್​ನೆಸ್​ ಜಾಗೃತಿ ಮೂಡಿಸುವ ಸಲುವಾಗಿ ನೈರುತ್ಯ ಸೇನಾ ಕಮಾಂಡರ್​ ದೆಹಲಿಯಿಂದ ಜೈಪುರಕ್ಕೆ ಸೈಕಲ್​ ಮೂಲಕ ಪ್ರಯಾಣಿಸಿದ್ದಾರೆ.

cycle
author img

By

Published : Sep 1, 2019, 11:03 PM IST

ನವದೆಹಲಿ: ಈಗಾಗಲೇ ಸೇನಾ ಮುಖ್ಯಸ್ಥ ಬಿಪಿನ್​ ರಾವತ್ ಅವರು ಸೇನೆಯಲ್ಲಿ ಸಧೃಢತೆ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದರೆ, ಇತ್ತ ನೈರುತ್ಯ ಸೇನಾ ಕಮಾಂಡರ್​ ಲೆಫ್ಟಿನೆಂಟ್ ಜನರಲ್​ ಅಲೋಕ್​ ಕ್ಲೇರ್​ ದೆಹಲಿಯಿಂದ ಜೈಪುರದ ತನಕ ಸೈಕಲ್ ತುಳಿಯುವ ಮೂಲಕ ಫಿಟ್​ನೆಸ್​ ಬಗ್ಗೆ ವಿಶೇಷ ಜಾಗೃತಿ ಮೂಡಿಸಿದ್ದಾರೆ.

"ಫಿಟ್​ನೆಸ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ನೈರುತ್ಯ ಸೇನಾ ಕಮಾಂಡರ್​ ಲೆಫ್ಟಿನೆಂಟ್ ಜನರಲ್​ ಅಲೋಕ್​ ಕ್ಲೇರ್, ಸೇನಾ ಸಿಬ್ಬಂದಿಯೊಡನೆ ದೆಹಲಿಯಿಂದ ಜೈಪುರಕ್ಕೆ ಸೈಕಲ್​ ಮೂಲಕ ತೆರಳಿದ್ದಾರೆ" ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸೈಕಲ್ ಸವಾರಿ ಮಾಡಿದ ಲೆಫ್ಟಿನೆಂಟ್

ಶನಿವಾರ ಮುಸ್ಸಂಜೆ ಹೊತ್ತಿಗೆ ದೆಹಲಿಯಿಂದ ಸೈಕಲ್​ನಲ್ಲಿ ಹೊರಟ ಅಧಿಕಾರಿ ಭಾನುವಾರ ಬೆಳಗ್ಗೆ 8 ಗಂಟೆಗೆ ಜೈಪುರ ತಲುಪಿದ್ದಾರೆ. 270 ಕಿಲೋ ಮೀಟರ್​ ದೂರ ಕ್ರಮಿಸಿ ಅವರು ಜೈಪುರದಲ್ಲಿ ತಮ್ಮ ಹೊಸ ನೇಮಕಾತಿಯ ಹುದ್ದೆಯ ಅಧಿಕಾರ ಸ್ವೀಕರಿಸಿದ್ದಾರೆ.

ಸೈನ್ಯದ ಫಿಟ್ಟೆಸ್ಟ್ ಜನರಲ್​ಗಳಲ್ಲಿ ಅಲೋಕ್ ಕ್ಲೇರ್​ ಒಬ್ಬರಾಗಿದ್ದಾರೆ. ಇತ್ತೀಚೆಗೆ ಅವರು, ತಮ್ಮ 58ನೇ ವಯಸ್ಸಿನಲ್ಲಿ ಪ್ಯಾರಾ ಜಂಪ್ ಮಾಡುವ ಮೂಲಕ ಗಮನಸೆಳೆದಿದ್ದರು.

Intro:Body:

medha

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.