ETV Bharat / bharat

ಮದುವೆಗೆ ಪೋಷಕರ ವಿರೋಧ: ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ - ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ

ಮದುವೆಗೆ ಪೋಷಕರು ಒಪ್ಪದ ಕಾರಣ ಪ್ರೇಮಿಗಳು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Lovers end life by jumping before train
ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ
author img

By

Published : Jun 18, 2020, 2:52 PM IST

ಲಲಿತ್​ಪುರ್(ಉತ್ತರ ಪ್ರದೇಶ): ಚಲಿಸುವ ರೈಲಿನ ಮಂದೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜಖ್ಲಾನ್ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದಿದೆ.

ಖಿರಿಯಮಿಶ್ರ್ ಗ್ರಾಮದ ಬಿನಾ-ಜಾನ್ಸಿ ರೈಲು ಹಳಿ ಬಳಿ ಮೃತದೇಹಗಳು ಪತ್ತೆಯಾಗಿವೆ ಎಂದು ಲಲಿತ್‌ಪುರ ಎಸ್‌ಪಿ ಎಂ.ಎಂ.ಬೇಗ್ ತಿಳಿಸಿದ್ದಾರೆ. ಮೃತರನ್ನು ಬಾಲು(22) ಮತ್ತು ರಶ್ಮಿ(18) ಎಂದು ಗುರುತಿಸಲಾಗಿದೆ.

ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗಬೇಕೆಂದು ನಿರ್ಧರಿಸಿದ್ದರು. ಆದರೆ, ಯುವಕ ಈಗಾಗಲೇ ವಿವಾಹವಾಗಿದ್ದರಿಂದ ಮದುವೆಗೆ ಪೋಷಕರು ಒಪ್ಪಿರಲಿಲ್ಲ. ಯುವಕನ ಚಿಕ್ಕಪ್ಪನ ಪ್ರಕಾರ ಇಬ್ಬರು 2 ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು. ಮಧ್ಯಪ್ರದೇಶದ ಗ್ರಾಮವೊಂದರಿಂದ ಇಬ್ಬರನ್ನು ವಾಪಸ್ ಕರೆ ತರಲಾಗಿತ್ತು ಎಂದಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.