ಹೈದರಾಬಾದ್: ಕಳೆದ 5 ದಶಕಗಳ ನಂತರ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆ ಕೈಕೈ ಮಿಲಾಯಿಸಿದ್ದು, ಗಾಲ್ವನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಎರಡೂ ದೇಶದ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ತೈವಾನ್ ನ್ಯೂಸ್, ಭಾರತ ಮತ್ತು ಚೀನಾ ನಡುವಿನ ಸಂಘರ್ಷವನ್ನು ಶ್ರೀರಾಮ ಮತ್ತು ಡ್ರ್ಯಾಗನ್ ನಡುವಿನ ಹೋರಾಟಕ್ಕೆ ಹೋಲಿಕೆ ಮಾಡಿದೆ.
ತೈವಾನ್ ನ್ಯೂಸ್ ಪ್ರಕಟಿಸಿರುವ ಚಿತ್ರದಲ್ಲಿ ನಾವು ಗೆಲ್ಲುತ್ತೇವೆ, ನಾವು ಕೊಲ್ಲುತ್ತೇವೆ ಎಂದು ಬರೆಯಲಾಗಿದೆ. ಹಿಂದೂ ದೇವರಾದ ಶ್ರೀರಾಮ ಬಿಲ್ಲನ್ನು ಎಳೆದು ದೊಡ್ಡ ಬಾಣವನ್ನು ಡ್ರ್ಯಾಗನ್ನತ್ತ ಬಿಡಲು ಸಿದ್ಧವಾಗಿರುವುದನ್ನು ಕಾಣಬಹುದಾಗಿದೆ.
ಈ ಚಿತ್ರ 21 ಗಂಟೆಗಳಲ್ಲಿ ಸಾವಿರಾರು ಲೈಕ್, ರಿಟ್ವೀಟ್‌ಗಳು ಮತ್ತು ಕಾಮೆಂಟ್‌ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸೋಮವಾರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇತ್ತ ಚೀನಾ ಕಡೆಯೂ ಸಾವು ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ.