ಚೆನ್ನೈ: 1978ರಲ್ಲಿ ತಮಿಳುನಾಡಿನ ನಾಗಪಟ್ಟಣಂನ ವಿಷ್ಣು ದೇವಸ್ಥಾನದಿಂದ ಕದ್ದ ವಿಜಯನಗರ ಕಾಲದ ಮೂರು ವಿಗ್ರಹ ಇದೀಗ ಭಾರತಕ್ಕೆ ವಾಪಸ್ ಬಂದಿವೆ. ಕ್ರಿ.ಶಕೆ 15ನೇ ಶತಮಾನದ ಭಗವಾನ್ ರಾಮ, ಸೀತೆ ಹಾಗೂ ಲಕ್ಷ್ಮಣ್ರ ವಿಗ್ರಹಗಳು ಇವಾಗಿವೆ.
1978ರಲ್ಲಿ ದೇವಾಲಯದಿಂದ ಈ ವಿಗ್ರಹಗಳು ಕಳ್ಳತನವಾಗಿದ್ದವು. ಇದೀಗ ಭಾರತದ ಹೈಕಮಿಷನ್, ಮೆಟ್ರೋಪಾಲಿಟನ್ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಲಾಗಿತ್ತು. 40 ವರ್ಷಗಳ ಬಳಿಕ ಈ ವಿಗ್ರಹಗಳು ಲಂಡನ್ನಿಂದ ಭಾರತಕ್ಕೆ ವಾಪಸ್ ಮಾಡಲಾಗಿದೆ.
-
Three statues of Vijayanagara period stolen from Vishnu Temple, Nagapattinam in 1978, recovered by
— ANI (@ANI) September 15, 2020 " class="align-text-top noRightClick twitterSection" data="
High Commission of India, London with support of Metropolitan Police, restored to Govt of Tamil Nadu in presence of Union Minister for Culture & Tourism Prahlad Patel: HCI, London pic.twitter.com/XXFDpm2aPE
">Three statues of Vijayanagara period stolen from Vishnu Temple, Nagapattinam in 1978, recovered by
— ANI (@ANI) September 15, 2020
High Commission of India, London with support of Metropolitan Police, restored to Govt of Tamil Nadu in presence of Union Minister for Culture & Tourism Prahlad Patel: HCI, London pic.twitter.com/XXFDpm2aPEThree statues of Vijayanagara period stolen from Vishnu Temple, Nagapattinam in 1978, recovered by
— ANI (@ANI) September 15, 2020
High Commission of India, London with support of Metropolitan Police, restored to Govt of Tamil Nadu in presence of Union Minister for Culture & Tourism Prahlad Patel: HCI, London pic.twitter.com/XXFDpm2aPE
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಮಾತನಾಡಿದ್ದು, ಲಂಡನ್ ಅಧಿಕಾರಿಗಳು 15ನೇ ಶತಮಾನದ ಈ ವಿಗ್ರಹಗಳನ್ನ ವಾಪಸ್ ನೀಡಿದ್ದಾರೆ ಎಂದಿದ್ದಾರೆ. ಈ ವಿಗ್ರಹಗಳು ಭಾರತಕ್ಕೆ ಸೇರಿದ್ದು, 1978ರಲ್ಲಿ ತಮಿಳುನಾಡಿನ ದೇವಾಲಯದಿಂದ ಕಳ್ಳತನ ಮಾಡಲಾಗಿತ್ತು ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಯುಕೆ ಅಧಿಕಾರಿಗಳು ಭಾರತಕ್ಕೆ ಇದೇ ರೀತಿಯ ಎರಡು ವಿಗ್ರಹ ಹಸ್ತಾಂತರ ಮಾಡಿದ್ದರು.