ಔರಾಯಾ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 28 ಮಂದಿಯನ್ನು ಬಂಧಿಸಲಾಗಿದೆ.
ರಂಜಾನ್ ಪ್ರಯುಕ್ತ ಸಮುದಾಯದ ಹಲವರು ಅಜಿತ್ಮಾಲ್ ವ್ಯಾಪ್ತಿಗೆ ಬರುವ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದರು. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು, ಬಂಧಿಸುವಂತೆ ಅಜಿತ್ಮಾಲ್ ಎಸ್‌ಎಚ್‌ಒಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ 35ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇದರಲ್ಲಿ 10-12 ಮಂದಿ 15 ವರ್ಷದೊಳಗಿನವರು. ಪರಾರಿಯಾದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಲ್ ಅಧಿಕಾರಿ ಕಮಲೇಶ್ ನಾರಾಯಣ್ ಪಾಂಡೇ ತಿಳಿಸಿದರು.
ಉತ್ತರ ಪ್ರದೇಶದಲ್ಲಿ 6,017 ಕೊರೊನಾ ವೈರಸ್ ಪ್ರಕರಣಗಳಿವೆ. 158 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.