ETV Bharat / bharat

ಸೈಕಲ್​ ಮೇಲೆ 750 ಕಿ.ಮೀ ಪ್ರಯಾಣಿಸಿ ಊರು ತಲುಪಿದ ಕಾರ್ಮಿಕ !! - ರೋಹ್ಟಕ್

ಬಡ ಕಾರ್ಮಿಕರು ಹೇಗಾದರೂ ಮಾಡಿ ತಮ್ಮ ಊರು ಸೇರಿಕೊಂಡರೆ ಸಾಕು ಎಂದು ದೇವರಲ್ಲಿ ನಿತ್ಯ ಮೊರೆ ಇಡುತ್ತಿದ್ದಾರೆ. ಆದರೆ, ಇದರಲ್ಲಿ ಕೆಲವರು ಹೇಗೋ ಧೈರ್ಯ ಮಾಡಿ ಊರು ಸೇರಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

Lockdown: Migrant labourers travel 750 km by bicycle

author img

By

Published : Apr 30, 2020, 6:02 PM IST

ರೋಹ್ಟಕ್ (ಹರಿಯಾಣ) : ಕೊರೊನಾ ವೈರಸ್​ ತಡೆಗಟ್ಟಲು ವಿಧಿಸಲಾಗಿರುವ ಕಟ್ಟುನಿಟ್ಟಿನ ಲಾಕ್​ಡೌನ್​ ದೇಶದ ಎಲ್ಲರ ಮೇಲೂ ಒಂದಿಲ್ಲೊಂದು ರೀತಿಯ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಸ್ಥರು, ಕಾರ್ಮಿಕರು ಹೀಗೆ ಎಲ್ಲರೂ ಒಂದು ರೀತಿ ಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಕೆಲಸ ಹುಡುಕಿಕೊಂಡು ಊರು ಬಿಟ್ಟು ದೂರದೂರಿಗೆ ಹೋದ ಕಾರ್ಮಿಕರ ಪಾಡಂತೂ ಹೇಳತೀರದಾಗಿದೆ. ಲಾಕ್​ಡೌನ್​ ಮುಂದುವರಿದಷ್ಟೂ ಇವರ ಜೀವನ ನರಕವಾಗುತ್ತಿದೆ.

ಬಡ ಕಾರ್ಮಿಕರು ಹೇಗಾದರೂ ಮಾಡಿ ತಮ್ಮ ಊರು ಸೇರಿಕೊಂಡರೆ ಸಾಕು ಎಂದು ದೇವರಲ್ಲಿ ನಿತ್ಯ ಮೊರೆ ಇಡುತ್ತಿದ್ದಾರೆ. ಆದರೆ, ಇದರಲ್ಲಿ ಕೆಲವರು ಹೇಗೋ ಧೈರ್ಯ ಮಾಡಿ ಊರು ಸೇರಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಇಂಥದೇ ಒಂದು ಸಾಹಸ ಮಾಡಿದ ಕಾರ್ಮಿಕನೋರ್ವ ಸೈಕಲ್​ ಮೇಲೆ 750 ಕಿ.ಮೀ ಪ್ರಯಾಣಿಸಿ ತನ್ನೂರು ತಲುಪಿದ್ದಾನೆ ಎಂದರೆ ನಂಬಲೇಬೇಕು.

750 ಕಿಮೀ ಪ್ರಯಾಣ ಮಾಡಿದ ಈ ಕಾರ್ಮಿಕ ತನ್ನ ಅನುಭವವನ್ನು ಈಟಿವಿ ಭಾರತ್​ನೊಂದಿಗೆ ಇತ್ತೀಚೆಗೆ ಹಂಚಿಕೊಂಡಿದ್ದಾನೆ. ಲಾಕ್​ಡೌನ್​ ಘೋಷಣೆಯಾದ ನಂತರ ಆದಾಯದ ಮೂಲ ನಿಂತುಹೋಗಿ ನೀರು ಹಾಗೂ ಊಟಕ್ಕಾಗಿ ಇವರೆಲ್ಲ ಪರದಾಡುವಂತಾಯಿತು. ಹೀಗಾಗಿ ಸೈಕಲ್​ ಮೇಲಾದರೂ ಸರಿ, ಊರಿಗೆ ಹೋಗುವುದೇ ಸರಿ ಎಂದು ಈತ ತೀರ್ಮಾನಿಸಿದ.

ಭಟಿಂಡಾದಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕ ಜಗತ್​ ಸಿಂಗ್​ ತನ್ನ ಕೂಲಿ ಹಣದಲ್ಲಿ ಒಂದಿಷ್ಟು ಮೊತ್ತವನ್ನು ಉಳಿತಾಯ ಮಾಡಿ ಇಟ್ಟುಕೊಂಡಿದ್ದ. ಇದೇ ಹಣದಿಂದ ಆತ ಬೈಸಿಕಲ್ ಹಾಗೂ ಚಕ್ರಕ್ಕೆ ಗಾಳಿ ತುಂಬಲು ಮೆಕ್ಯಾನಿಕಲ್ ಪಂಪ್‌ವೊಂದನ್ನು ಖರೀದಿಸಿದ. ನಂತರ ಬ್ಯಾಗ್​ನಲ್ಲಿ ಒಂದಿಷ್ಟು ನೀರಿನ ಬಾಟಲಿ, ಆಹಾರ ಇಟ್ಟುಕೊಂಡು ತನ್ನೂರಿನ ದಿಕ್ಕಿನತ್ತ ಸೈಕಲ್ ತುಳಿಯಲಾರಂಭಿಸಿದ. ಕೊನೆಗೂ ಕೆಲ ದಿನಗಳ ನಂತರ ಆತ ತನ್ನೂರು ಸೇರಿಕೊಂಡ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.