ETV Bharat / bharat

ಇಂದಿನಿಂದ ಲಾಕ್​ಡೌನ್​ 5.0: ಏನೆಲ್ಲ ವಿನಾಯ್ತಿ, ಯಾವುದಕ್ಕೆ ನಿಷೇಧ!? - ಕೋವಿಡ್​-19

ದೇಶಾದ್ಯಂತ ಇಂದಿನಿಂದ ಲಾಕ್​ಡೌನ್​ 5.0 ಜಾರಿಗೊಳ್ಳಲಿದ್ದು, ಅನೇಕ ಸಡಲಿಕೆ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಹಾಕಿದೆ.

Lockdown 5.0
Lockdown 5.0
author img

By

Published : Jun 1, 2020, 5:29 AM IST

ನವದೆಹಲಿ: ದೇಶಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರಿದಿದ್ದು, ಇದರ ಮಧ್ಯೆ ದೇಶದಲ್ಲಿ ಇಂದಿನಿಂದ ಜೂನ್​ 30ರವರೆಗೆ ಲಾಕ್​ಡೌನ್​​ 5.0 ಜಾರಿಯಲ್ಲಿರಲಿದೆ. ಈ ವೇಳೆ ಅನೇಕ ಸಡಲಿಕೆ ನೀಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಹಾಕಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಹೇಳಲಾಗಿದೆ. ಬಸ್​, ರೈಲ್ವೆ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ,ಮಧ್ಯಪಾನ, ಪಾನ್​ ಮಸಾಲ, ಗುಟ್ಕಾ ಸೇವನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬರುವಂತಿಲ್ಲ.

ಮದುವೆ ಕಾರ್ಯಕ್ರಮ, ಅಂತ್ಯ ಸಂಸ್ಕಾರದ ವೇಳೆ ಹೆಚ್ಚು ಜನರು ಸೇರಲು ನಿರ್ಬಂಧ ಹೇರಲಾಗಿದ್ದು, ಮದುವೆ ಕಾರ್ಯಕ್ರಮಕ್ಕೆ 50 ಹಾಗೂ ಅಂತ್ಯ ಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗಿಯಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ.

ಮನೆಯಿಂದಲೇ ಕೆಲಸ ಮಾಡಲು ಅವಕಾಶ. ಕಚೇರಿಯಿಂದ ಸೀಮಿತ ಸಿಬ್ಬಂದಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. 5ನೇ ಹಂತದ ಲಾಕ್​ಡೌನ್​ ವೇಳೆ ಪ್ರಮುಖವಾಗಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ ಕಂಟೈನ್ಮೆಂಟ್​​ ಝೋನ್​​ಗಳಲ್ಲಿ ಲಾಕ್​ಡೌನ್​ ನಿಯಮ ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಅಂತರರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಪಾಸ್​ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಇದಿನಿಂದ ದೇಶಾದ್ಯಂತ 200 ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಕರ್ನಾಟಕದಲ್ಲೂ ಹೋಟೆಲ್, ಜಿಮ್, ದೇವಸ್ಥಾನ, ಮಸೀದಿ, ಚರ್ಚ್ ಓಪನ್​ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಅದಕ್ಕಾಗಿ ಇಂದು ಸಂಜೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.