ETV Bharat / bharat

'ಮೊದಲು ಕ್ವಾರಂಟೈನ್​ ಆಗಿ'... ಸಚಿವರಿಗೆ ಊರೊಳಗೆ ಪ್ರವೇಶ ನೀಡದ ಸ್ಥಳೀಯರು

ಕಾರ್ಮಿಕರ ಸಮಸ್ಯೆಯನ್ನು ಕೇಳಲು ಬರುತ್ತಿದ್ದ ಸಚಿವರನ್ನು ಊರಿನ ಪ್ರವೇಶದ್ವಾರದ ಬಳಿಯೇ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

author img

By

Published : Jun 9, 2020, 5:28 PM IST

Locals stage protest against Himachal Minister
ಸಚಿವರಿಗೆ ಊರೊಳಗೆ ಪ್ರವೇಶ ನೀಡದ ಸ್ಥಳೀಯರು

ಹಿಮಾಚಲ ಪ್ರದೇಶ: ಸೆಲ್ಫ್​ ಕ್ವಾರಂಟೈನ್​ ಆಗದೆ ಊರಿನೊಳಗೆ ಪ್ರವೇಶವಿಲ್ಲ ಎಂದು ಹಿಮಾಚಲ ಪ್ರದೇಶದ ಕೃಷಿ ಸಚಿವ ಡಾ.ರಾಮ್ ಲಾಲ್ ಮಾರ್ಕಂಡ ಅವರನ್ನು ಸ್ಥಳೀಯರು ವಾಪಸ್​ ಕಳುಹಿಸಿರುವ ಘಟನೆ ಕಾಝಾ ಪಟ್ಟಣದಲ್ಲಿ ನಡೆದಿದೆ.

ಸಚಿವರಿಗೆ ಊರೊಳಗೆ ಪ್ರವೇಶ ನೀಡದ ಸ್ಥಳೀಯರು

ಕಾಝಾದ ಕಾರ್ಮಿಕರ ಸಮಸ್ಯೆಯನ್ನು ಕೇಳಲು ಬರುತ್ತಿದ್ದ ಸಚಿವರನ್ನು ಪ್ರವೇಶದ್ವಾರದ ಬಳಿಯೇ ಜಿಲ್ಲೆಯ ಮಹಿಳಾ ಮಂಡಳಿ ಕಾರ್ಮಿಕರು ಸೇರಿ ನೂರಾರು ಜನರು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾಕಾರರು, ಮಾರ್ಕಂಡ ಅವರು ಹೊರಗಡೆಯಿಂದ ಬಂದಿದ್ದು, ಅವರು ಕಾಝಾ ಪ್ರವೇಶಿಸುವ ಮೊದಲು ಕ್ವಾರಂಟೈನ್​ ನಿಯಮವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಕೇರಳದ ಕಣ್ಣೂರಿನಿಂದ ಕಾಝಾಗೆ ಬಸ್​ನಲ್ಲಿ ಬಂದ ಜನರನ್ನು ತಡೆದು, ಬಸ್​ ಅನ್ನು ವಾಪಸ್​ ಕಳುಹಿಸಿದ್ದ ಘಟನೆ ನಡೆದಿತ್ತು. ಇದೀಗ ಕಾರ್ಮಿಕರ ಜೊತೆ ಸಭೆ ನಡೆಸಲೂ ಆಗದೆ, ಕಾಝಾದ ತಮ್ಮ ಕಚೇರಿಗೆ ಭೇಟಿ ನೀಡಲೂ ಆಗದೆ ರಾಮ್ ಲಾಲ್ ಮಾರ್ಕಂಡ ಹಿಂದಿರುಗಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.