ETV Bharat / bharat

ಇಡಿಯಿಂದ ಸುಶಾಂತ್ ಸಹೋದರಿ ಮಿತು ಸಿಂಗ್​ ವಿಚಾರಣೆ

author img

By

Published : Aug 11, 2020, 12:46 PM IST

ಸುಶಾಂತ್ ಸಹೋದರಿ ಮಿತು ಸಿಂಗ್ ಹಾಗೂ ಮಾಜಿ ಬ್ಯುಸಿನೆಸ್ ಮ್ಯಾನೇಜರ್​ ಶೃತಿ ಮೋದಿ ಇಡಿ ಕಚೇರಿಗೆ ಬಂದಿದ್ದಾರೆ.

Sushant Singh
ಸುಶಾಂತ್​ ಸಿಂಗ್ ರಜಪೂತ್

ಮುಂಬೈ: ಸುಶಾಂತ್​ ಸಿಂಗ್ ರಜಪೂತ್​​ ಸಾವಿನ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಇಂದು ನಟನ ಸಹೋದರಿ ಮಿತು ಸಿಂಗ್​ ಮತ್ತು ಮಾಜಿ ಬ್ಯುಸಿನೆಸ್ ಮ್ಯಾನೇಜರ್​ ಶೃತಿ ಮೋದಿ ಅವರನ್ನು ವಿಚಾರಣೆಗೊಳಪಡಿಸಲಿದೆ.

ಇಡಿ ಕಚೇರಿಗೆ ಬಂದ ಮಿತು ಸಿಂಗ್​

ಈಗಾಗಲೇ ಮಿತು ಸಿಂಗ್​ ಮತ್ತು ಶೃತಿ ಮೋದಿ ಇಡಿ ಕಚೇರಿಗೆ ಬಂದಿದ್ದು, ವಿಚಾರಣೆ ಆರಂಭವಾಗಿದೆ.

ನಟನ ಹಣಕಾಸಿನ ವಿಚಾರ ಕುರಿತ ತನಿಖೆಗೆ ಸಂಬಂಧಿಸಿದಂತೆ ಇಡಿ ನಿನ್ನೆ ಸುಶಾಂತ್​ರ ಸ್ನೇಹಿತೆ ರಿಯಾ ಚಕ್ರವರ್ತಿ, ಅವರ ತಂದೆ ಮತ್ತು ಸಹೋದರನ ವಿಚಾರಣೆ ನಡೆಸಿತ್ತು. ಅಲ್ಲದೇ ಸುಶಾಂತ್​ರ ಸಹೋದರಿ ರಾಣಿ ಸಿಂಗ್​ ಹಾಗೂ ತಂದೆ ಕೆ.ಕೆ.ಸಿಂಗ್​ ಅವರ ಹೇಳಿಕೆಗಳನ್ನು ಸಿಬಿಐ ಅಧಿಕಾರಿಗಳು ನಿನ್ನೆ ರೆಕಾರ್ಡ್​ ಮಾಡಿಕೊಂಡಿದ್ದರು.

Sushant Sing
ಇಡಿ ಕಚೇರಿಗೆ ಬಂದ ಶೃತಿ ಮೋದಿ

ಸುಶಾಂತ್​ ಸಿಂಗ್​ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದು, ಪ್ರಕರಣವನ್ನು ಸಿಬಿಐ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿ, ಶೃತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಸೇರಿದಂತೆ ಆರು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.