ETV Bharat / bharat

'ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟ ಖಾಸಗೀಕರಣ ಮಾಡ್ತೀವಿ..!' - ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸುದ್ದಿ

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮಕ್ಕಳ್ ನಿಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

kamal hasan
ಕಮಲ್ ಹಾಸನ್​
author img

By

Published : Dec 14, 2020, 5:14 PM IST

ಮಧುರೈ (ತಮಿಳುನಾಡು): ನಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟವನ್ನು ಖಾಸಗೀಕರಣ ಮಾಡಿ, ಜನರಿಗೆ ಉಚಿತವಾಗಿ ಕುಡಿಯುವ ನೀರು ನೀಡುತ್ತೇವೆ ಎಂದು ನಟ ಮತ್ತು ರಾಜಕಾರಣಿ ಕಮಲ್​ ಹಾಸನ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಈಗಲೇ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳ್ ನಿಧಿ ಮೈಯಂ(ಎಂಎನ್ಎಂ​) ಮುಖ್ಯಸ್ಥ ಕಮಲ್​ ಹಾಸನ್ ಮಧುರೈನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಈ ರೀತಿಯಾಗಿ ಮಾತನಾಡಿದ್ದಾರೆ.

ಪ್ರಚಾರದ ಭಾಗವಾಗಿ ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದ ಕಮಲ್​ ಹಾಸನ್ 'ಮಧುರೈ ತಮಿಳುನಾಡಿನ ಎರಡನೇ ರಾಜಧಾನಿಯಾಗಬೇಕು ಎಂದು ಎಂಜಿಆರ್ ಆಶಯವಾಗಿದ್ದು, ಅದನ್ನು ಎಂಎನ್​ಎಂ ಪೂರ್ಣಗೊಳಿಸುತ್ತದೆ' ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಇದನ್ನೂ ಓದಿ: ದೇಶದ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿರುವಾಗ ಇಷ್ಟು ವೆಚ್ಚದ ಸಂಸತ್​ ಭವನ ಬೇಕೇ?: ಕಮಲ್​ ಹಾಸನ್​

ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಅಳಿಸಿ ಹಾಕುವ ಸಮಯ ಬಂದಿದೆ. ನಾನು ಯಾವುದೇ ಸಿದ್ಧತೆ ಇಲ್ಲದೇ ಕೆಲಸ ಮಾಡುವುದಿಲ್ಲ. ನಾವು ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸರ್ಕಾರವನ್ನು ಕಟ್ಟುತ್ತೇವೆ ಎಂದು ಕಮಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಹಣ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಮಲ್ ಹಾಸನ್ ಪ್ರಾಮಾಣಿಕರಾಗಿರುವುದೇ ನಮ್ಮ ಭರವಸೆ. ಊಟವಿಲ್ಲದ ಹಾಗೂ ಮೂಲ ಸೌಕರ್ಯಗಳಿಲ್ಲದ ವ್ಯಕ್ತಿಗೆ ಐದು ಸಾವಿರ ರೂಪಾಯಿಗಳನ್ನು ನೀಡಿದರೆ ಮತಹಾಕಲು ಒಪ್ಪಿಕೊಂಡುಬಿಡುತ್ತಾನೆ. ಅದು ಬದಲಾಗಬೇಕು. ಭ್ರಷ್ಟಾಚಾರ ತೊಡೆದುಹಾಕಲು ನಿಮ್ಮ ಸಹಕಾರ ಬೇಕು ಎಂದು ಕಮಲ್ ಹಾಸನ್ ಜನರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.