ಬೆಂಗಳೂರು: ಹಿಂದಿ ತಿಳಿಯದಿರುವುದು ನಿಮ್ಮ ಭಾರತೀಯ ನಾಗರಿಕತ್ವವನ್ನು ಕಡಿಮೆ ಮಾಡುವುದಿಲ್ಲ ಎಂದು ಹಿರಿಯ ರಾಜಕಾರಣಿ ಮತ್ತು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಎಂ. ಕೃಷ್ಣ ಅವರು ತಿಳಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಎದುರಿಸಿದ ಪ್ರಸಂಗದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಹಿಂದಿ ಮತ್ತೊಂದು ಭಾರತೀಯ ಭಾಷೆ ಅಷ್ಟೆ ಇದಕ್ಕಿಂತ ಹೆಚ್ಚೇನೂ ಇಲ್ಲ ಎನ್ನುವ ಮೂಲಕ, ಕನಿಮೊಳಿ ಅವರ ನಡೆಯನ್ನು ಟೀಕಿಸಿದರು.
ಅಲ್ಲದೆ ಹಿಂದಿಯನ್ನು ರಾಷ್ಟ್ರೀಯತೆಯೊಂದಿಗೆ ಹೋಲಿಸಬಾರದು ಎಂದು ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು ಹೇಳಿದ ಮಾತನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಂಡರು.