ತಮಿಳುನಾಡು: ಗುಟುರು ಹಾಕುತ್ತಾ, ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತಾ ಬಂದ ಚಿರತೆ ಮನೆಯ ಮುಂಭಾಗವೇ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ ನಾಯಿಯನ್ನ ಅಟ್ಟಿಸಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ವಾಲಪಾರೈ ಗ್ರಾಮಸ್ಥರೊಬ್ಬರ ಮನೆಯಂಗಳಕ್ಕೆ ನುಗ್ಗಿದ ಚಿರತೆ. ಸೀದ ಬಂದು ಮನೆಯ ಬಾಗಿಲಿನ ಮುಂದೆ ಮಲಗಿದ್ದ ನಾಯಿ ಮೇಲೆ ದಾಳಿಗೆ ಮುಂದಾಗಿದೆ. ತಕ್ಷಣವೇ ಎಚ್ಚರಗೊಂಡ ನಾಯಿ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿದ್ದು, ಚಿರತೆ ಕೂಡ ಹಟಬಿಡದೆ ನಾಯಿಯನ್ನ ಅಟ್ಟಿಸಿಕೊಂಡು ಹೋಗಿದೆ.
ಇನ್ನೂ ಈ ಘಟನೆ ಮನೆಯ ಕಟ್ಟಡದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನೆ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.