ವಿಶಾಖಪಟ್ಟಣಂ: ಎಲ್ಜಿ ಪಾಲಿಮರ್ಸ್ ಕಂಪನಿ ವಿರುದ್ಧ ಎಡಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಳೆದ ತಿಂಗಳು ಕಂಪನಿಯಲ್ಲಿ ಅನಿಲ ಸೋರಿಕೆ ಆಗಿ ಹಲವರನ್ನ ಬಲಿ ಪಡೆದಿತ್ತು.
ಈ ಕಾರಣದಿಂದ ಸೂಕ್ತ ಪರಿಹಾರ ಹಾಗೂ ರಕ್ಷಣೆಗೆ ಒತ್ತಾಯಿಸಿ ಎಡಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಗೆ ಯಾವುದೇ ಪರವಾನಗಿ ಪಡೆಯದ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರಲ್ಲದೇ 96 ಮಂದಿಯನ್ನ ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.